Verse 1

ಕ್ರೀಸ್ತ್ಯೇಸು ನನ್ನ ಹೃದವಂ
ನೀ ಗೆದ್ದುಕೊಂಡು ತಿದ್ದು
ನನ್ನಿಷ್ಟ ಪಾಪವೃತ್ತಿಯಂ
ನೀ ದಯಮಾಡಿ ಕಿತ್ತು
ದುರಾಶೆ ನೊಂದಿಸೆನ್ನೊಳು
ನಿನ್ನಧಿಕಾರ ಸ್ಥಾಪಿಸು.

Verse 2

ಇನ್ನೊಬ್ಬನಾಳಬಾರದು
ಈ ಹೃದಪೀಠದಲ್ಲಿ
ಪಿಶಾಚಗೊಳಗಾಗೆನು
ನೀನಾಳುವಷ್ಟರಲ್ಲಿ
ಬಂದೀಗ ಶಾಂತಿರಾಜನೆ
ನಿವಾಸ ಮಾಡೆನ್ನೊಳಗೆ.

Verse 3

ವಿಶ್ವಾಸ ಭಕ್ತಿ ಹುಟ್ಟಿಸಿ
ಕೊಡೆಂಗೆ ನಿನ್ನ ತತ್ವ
ನಿನ್ನಾತ್ಮದಿಂದ ಹೀರಲಿ
ನನ್ನಾತ್ಮ ಹೊಸ ಸತ್ವ
ಅದಾಗಿ ನಿನ್ನ ಮರವು
ಹೂ ಹಣ್ಣು ಬಿಡದಿರದು.

Verse 4

ಕಠಿಣವಲ್ಲವೆನ್ನುವೆ
ನೀನಾಜ್ಞೆ ಕೊಡುವಾಗ
ನಾ ಹೊತ್ತುಕೊಂಡು ಬರುವೆ
ನೀ ಕ್ರೂಜೆ ಹೊರಂದಾಗ
ನನ್ನಾಳ್ಮ ನಿನ್ನ ಚಿತ್ತವೆ
ಮೃಷ್ಟಾನ್ನ ನಿನ್ನ ಆಳಿಗೆ.

Go to top