Verse 1

ಕರ್ತಾ ನಾ ನಿನ್ನ ತೊರೆದು
ಅಪಾತ್ರನಾದೆನೋ?
ಆರಂಭ ಪ್ರೀತಿಜಳವು
ತಂಪಾಗಿ ಹೋದೀತೋ?
ಅದನ್ನು ಮತ್ತೆ ಉರಿಸಿ
ಸದ್ಭಕ್ತಿ ವರ್ಧಿಸು.
ಕೈ ಹಿಡಿದೆನ್ನ ನಡಿಸಿ
ವಿಮುಕ್ತಿ ಕಾಣಿಸು.

Verse 2

ನನ್ನಲ್ಲಿ ಪಾಪ ಬೀಜವೆ
ಇನ್ನುಂಟು ಸತ್ಯವು
ನಾ ನಿದ್ರೆ ಮಾಡಿಕಾಯದೆ
ಮೈಮರೆತಿರಲು
ಅದ್ಹೊಸದಾಗಿ ಮೊಳಿತು
ಸದ್ಬೀಜ ಅಣಗಿ
ಕೆಟ್ಟೇನು ಸ್ವಾಮಿ ನನ್ನನ್ನು
ಕಾಪಾಡು ದಯದಿ.

Verse 3

ಹಣ್ಣಿಲ್ಲದಂಥ ಮರವು
ನಾನಾಗಲೊಲ್ಲೆನು
ತಂಪುಳ್ಳ ಪ್ರಾಣಸ್ಥಿತಿಯು
ನಂಗಿರಬಾರದು.
ವಿಶ್ವಾಸ ಬಲಪಡಿಸಿ
ಹೃದ್‍ಜ್ವಾಲೆ ಹೊತ್ತಿಸು
ನನ್ನಲಲಿ ನಿನ್ನ ಕಾರ್ಯದಿ
ವಾತ್ಸಲ್ಯ ಹುಟ್ಟಿಸು.

Verse 4

ನೀ ಶಿಕ್ಷೆ ರಕ್ಷೆ ನಡಿಸಿ
ನನ್ನನ್ನು ಪಾಲಿಸು.
ಇನ್ನಾಗೋ ಎಲ್ಲ ಯುದ್ಧದಿ
ವಿಜಯಗೊಳ್ಳಿಸು.
ಹೀಗಾಗಿ ಮೋಕ್ಷಸ್ಥಳಕ್ಕೆ
ನಾ ಯೋಗ್ಯನಾಗುವೆ.
ಸಮಸ್ತ ಸ್ತೋತ್ರ ಕೃಪೆಗೆ
ಎಂದಲ್ಲಿ ಹಾಡುವೆ.

Go to top