Verse 1

ಸದ್ಗುಣ ಶಿರೋಮಣಿಯಾದ
ಸ್ವರ್ಗೀಯ ಗುರು ಯೇಸುವೇ.
ಸುನೀತಿಗ್ಹಸಿದವನಾದ
ನನ್ನನ್ನು ಸೆಳೆ ಮೇಲಕೆ.
ಸಂಪೂರ್ಣ ನಿನ್ನ ಶೀಲತೆ
ಆದರ್ಶವೆನಗೆ.

Verse 2

ನೀ ನಡೆ ನುಡಿ ಬಗೆಯಲ್ಲಿ
ಅತೀತ ಪರಂಜ್ಯೋತಿಯು
ನಿನ್ನಾತ್ಮ ಶುಧ್ಧಿ ಸರ್ವರಲ್ಲಿ
ಪವಿತ್ರ ಸಾಕ್ಷಿ ಕೊಟ್ಟಿತು.
ಆಹಾ ನಾನಾಗತಕ್ಕದ್ದು
ನಿನ್ನಂತೆ ಶುದ್ಧನು.         

Verse 3

ಕಾರುಣ್ಯ ನಿಧಿ ಪುಣ್ಯಸೂರ
ಆಧಾರಹೀನ ಪಾಪಿಗೆ
ನೀನೊಲಿದು ಕಟಾಕ್ಷಪೂರ
ಕೈಕೊಡುತ್ತಿದ್ದಿ ನಿತ್ಯವೆ.
ನಾನೂ ಹಾಗಾಗತಕ್ಕದ್ದು
ಕಾರುಣ್ಯಶೀಲನು.

Verse 4

ನಿನ್ನವತಾರ ಚರ್ಯೆಯಲ್ಲಿ
ಎಳ್ಳಷ್ಟು ಹಮ್ಮು ಕಾಣದು
ನೀ ತಗ್ಗಿಕೊಂಡಿ ದೈನ್ಯದಲ್ಲಿ
ಅಘೋರ ಕ್ರೂಜೆ ಮಟ್ಟಿಗು.
ಆಹಾ ನಾನಾಗತಕ್ಕದ್ದು
ನಿನ್ನಂತೆ ದೀನನು.

Verse 5

ಸಮಸ್ತ ನಿನ್ನ ಕೃತ್ಯದಲ್ಲಿ
ಸಾತ್ವೀಕಭಾವ ತೋರುತೆ
ಶ್ರೀ ಯೇಸು ಎಲ್ಲ ಜನರಲ್ಲಿ
ನೀನಿದ್ದಿ ಸತ್ಯವಂತನೆ.
ನಿನ್ನಂತೆ ಆಗ ಮನಸ್ಸು
ನನ್ನಲ್ಲಿ ಇಹುದು.

Verse 6

ನೀ ಸೌಮ್ಯಗುರು ಶಾಂತ ಮೂರ್ತಿ
ಸಂಕಷ್ಟ ತಾಳ್ದ ಯೇಸುವೇ
ನಿನ್ನಲ್ಲಿ ಸೈರಣೆಯ ಪೂರ್ತಿ
ಸುರತ್ನದಂತೆ ಮಿಂಚುತೆ.
ಆಹಾ ನಾನಾಗತಕ್ಕದ್ದು.
ನಿನ್ನಂತೆ ಶಾಂತನು.

Verse 7

ವಿಧೇಯ ಯೇಸು ಎಲ್ಲ ವೇಳೆ
ನೀ ದೇವರಾಜ್ಞೆಗೊಪ್ಪಿದಿ
ಸ್ವಚಿತ್ತವನ್ನು ಕೊಟ್ಟ ಮೇಲೆ
ಸ್ವಜೀವದಾನ ಮಾಡಿದಿ
ಆಹಾ ನಾನಾಗತಕ್ಕದ್ದು
ಅಂಥ ವಿಧೇಯನು.

Go to top