Verse 1

ಸಭೆ ದೇವಪ್ರಜೆಯೇ
ದಿವ್ಯ ಆತ್ಮ ಜನ್ಮದಲ್ಲಿ
ಅವರಲ್ಲಿ
ಹೊಸ ಜೀವವಾಯಿತು.
ಕರ್ತನು
ಅವರರಸಾಗಿದ್ದಾನೆ
ಅವರನ್ನು ಕಾಯುತ್ತಾನೆ
ಆತನಲ್ಲಿ ಬಾಳೊರು.

Verse 2

ನನ್ನ ಪ್ರಿಯ ಕರ್ತನೇ
ನೀನೆನ್ನನ್ನು ಪ್ರೀತಿಯಿಂದ
ಲೋಕದಿಂದ
ಕೊಂಡುಕೊಂಡಿ. ನಿನಗೆ
ಯೇಸುವೆ
ನಾನು ಬಡ ಪಾಪಿಯಾಗಿ
ನಿನ್ನ ದೊಡ್ಡ ಪ್ರೀತಿಗಾಗಿ
ನಿತ್ಯ ಸ್ತೋತ್ರ ಮಾಡುವೆ.

Verse 3

ನೀನು ಮೇಲಕ್ಕೇರಿದ್ದಿ
ಕೂತುಕೊಂಡಿ ಪೀಠದಲ್ಲು
ಭೂಮಿಯಲ್ಲು
ಎಲ್ಲವನ್ನು ಆಳುತಿ.
ನಮ್ಮಲಿ
ನಿನ್ನ ಕಾರ್ಯ ತೀವ್ರವಾಗಿ
ನಿನ್ನ ಕೀರ್ತಿ ಘನಕಾಗಿ
ಅಭಿವೃದ್ದಿಯಾಗಲಿ.

Verse 4

ಈ ಪ್ರಪಂಚ ಹೋಗಲಿ
ಹೋಗಲೆಲ್ಲ ಮಾಂಸಪೋಷ
ಈ ಸಂತೋಷ
ಕ್ರೈಸ್ತರಿಂಗೆ ಬೇಡವು.
ಮೋಕ್ಷವು
ಇಂಥ ಮಾಂಸಭೋಗದಲ್ಲಿ
ಸಿಕ್ಕೊದಿಲ್ಲ ನಮಗಲ್ಲಿ
ತೃಪ್ತಿ ತಪ್ಪ ಬಾರದು.

Verse 5

ನಿನ್ನ ಆತ್ಮ ನಮಗೆ
ಕೊಡು ಆದರಿಕನಾಗಿ
ನಿತ್ಯವಾಗಿ
ವಾಸಮಾಡಲೆಮ್ಮಲಿ.
ಕ್ರಿಸ್ತನೆ
ನಾವು ನಿನ್ನ ಪಾದಸೇವೆ
ಪ್ರೀತಿಯಿಂದ ಮಾಡುತೇವೆ
ಜೀವವಿರೋ ವರೆಗೆ.

Verse 6

ಕ್ರಿಸ್ತ ತಂದೆಮನೆಗೆ
ಸೇರಲಾಶೆ ಮಾಡುತೇವೆ
ಶುದ್ಧ ಸೇವೆ
ಆಗಲಲ್ಲಿ ನಿನಗೆ
ನಿತ್ಯಕೆ.
ದಿವ್ಯಭಾಗ್ಯದತಿಶಯ
ಸಮಾಧಾನರಾಜ್ಯ ಜಯ
ತೋರಮಾಡು ಕರ್ತನೆ.

Go to top