Verse 1

ಅಸ್ಥಿರಲೋಕ ಬೇಡವೆನಗೆ
ಪ್ರಪಂಚವನ್ನಸಡ್ಡೆ ಮಾಡುತೇನೆ.
ಅಬದ್ಧ ಕೀರ್ತಿ ನನಗೇತಕೆ?
ನಾ ಕ್ರೈಸ್ತನು ನಾ ಕ್ರೈಸ್ತ
ಮೋಕ್ಷಾಸಕ್ತನಾಗಿದ್ದೇನೆ.

Verse 2

ರಾಜಾಧಿರಾಜ ಯೇಸು ಕ್ರಿಸ್ತನು
ನನ್ನರಸೆಂತ ಅಡ್ಡಬೀಳುತೇನೆ.
ವಿಶ್ರಾಂತಿರಾಜ ನನ್ನ ಅರಸು
ನಾ ಕ್ರೈಸ್ತನು ನಾ ಕ್ರೈಸ್ತ
ಹೌದು ಬಂಟನಾಗಿದ್ದೇನೆ.

Verse 3

ಬಾ ನಮ್ಮ ಕೂಡ ಭೋಗ ಮಾಡಿಕೋ
ಎಂದೊದರುತ್ತೆ ಲೋಕಭ್ರಾಂತ ಸೇನೆ.       
ಆ ಕೂಗು ಬಿಡಿ ನಿಮ್ಮ ಕೇಳಲೋ
ನಾ ಕ್ರೈಸ್ತನು ನಾ ಕ್ರಿಸ್ತ
ಪಾದದಲ್ಲಿ ಕೂಡ್ರತೇನೆ.

Verse 4

ಕೈಸನ್ನೆ ಕಣ್ಣುಸನ್ನೆ ನೋಡೆನು
ನಿಮ್ಮಲ್ಲಿ ಇದ್ದರೆನ್ನಮಾರ್ಗ ಬೇರೆ.
ನಿಮ್ಮಾಶೆಭುಕ್ತಿ ಮುಕ್ತಿ ನನ್ನದು
ನಾ ಕ್ರೈಸ್ತನು ನಾ ಕ್ರೈಸ್ತ
ನಿಮ್ಮ ಮರುಳಲ್ಲಿ ಸೇರೆ.

Verse 5

ಅರಿಷ್ಟನೆಂಗೆ ಕಷ್ಟ ಬಹಳ
ಕಣ್ಣೀರು ಬಿಟ್ಟು ಯಾತ್ರೆ ಮಾಡುತ್ತೇನೆ.
ಇದೇನು? ಕ್ರಿಸ್ತ ಹೆಚ್ಚು ತಾಳಿದ
ನಾ ಕ್ರೈಸ್ತನು ನಾ ಕ್ರೈಸ್ತ
ಕ್ರಿಸ್ತ ಜೊತೆಯಲ್ಲಿದ್ದೇನೆ.

Verse 6

ಹೋರಾಟ ಬಹು ಉಗ್ರವಹುದು
ಆದಾಗ್ಯೂ ನಂಗೆ ಜಯ ತಪ್ಪೊದಿಲ್ಲ.
ಈ ಜೀವ ತೀರೆ ಸುಖಿಯಹೆನು
ನಾ ಕ್ರೈಸ್ತನು ನಾ ಕ್ರೈಸ್ತ
ನಂಗೆ ಮೃತಿಭಯವಿಲ್ಲ.

Verse 7

ಅನಂತ ಜೀವಸೂರ್ಯ ಮೂಡಲು
ಉತ್ಥಾನಸೈನ್ಯದಲ್ಲಿ ನಾನು ಇರ್ವೆ
ಸಮಾಧಿಯಿಂದ ಹಾರಿ ಏಳ್ವೆನು.
ನಾ ಕ್ರೈಸ್ತನು ನಾ ಕ್ರೈಸ್ತ
ನಿತ್ಯವಾಗಿ ಬಾಳುತಿರ್ವೆ.

Go to top