Verse 1

ದೇವಪುತ್ರರೆಲ್ಲರು
ಎಷ್ಟೋ ಭಾಗ್ಯವಂತರು.
ಪಾಪ ದುಃಖ ಭಯವು
ಪರಿಹಾರವಾಯಿತು.
ನಾನು ಅವರೊಂದಿಗೆ
ಪಾಲುಗಾರನಾಗುವೆ.

Verse 2

ಕ್ರಿಸ್ತನಿಂದಲವರೋ
ನೀತಿವಂತರಲ್ಲವೋ?
ಮನಶ್ಯಾಂತಿ ತೃಪ್ತಿಯು
ಅವರನುಭವವು.
ನಾನು ಅವರೊಂದಿಗೆ
ಪಾಲುಗಾರನಾಗುವೆ.

Verse 3

ತಂದೇ ಹತ್ರ ಹೋಗಲು
ಮಕ್ಕಳಂಜಲಾರರು
ದೇವರನ್ನು ಭಕ್ತರು
ನೋಡಿ ಹರ್ಷಿಸುವರು.
ನಾನು ಅವರೊಂದಿಗೆ
ಪಾಲುಗಾರನಾಗುವೆ.

Verse 4

ಬಾಧೆ ಕಷ್ಟ ಬಂದರು
ನಷ್ಟ ಹೊಂದಲಾರರು
ಶ್ರಮೆ ದೇವಜನಕ್ಕೆ
ಮೇಲು ಉಂಟುಮಾಡುತ್ತೆ.
ನಾನು ಅವರೊಂದಿಗೆ
ಪಾಲುಗಾರನಾಗುವೆ.

Verse 5

ಇಹದಲ್ಲಿ ಕೃಪೆಯ
ಸಾಯುವಲ್ಲಿ ಜಯವ.
ಪರದಲ್ಲಿ ಜೀವವ
ಹೊಂದ್ವರಂಥ ಸಂತಸ.
ನಾನು ಅವರೊಂದಿಗೆ
ಪಾಲುಗಾರನಾಗುವೆ.

Go to top