Verse 1

ನಿನ್ನಲೆನಗುಂಟಾಶ್ರಯ
ಏನೂ ಅಂಜದಿರ್ವೆನು
ಶಾಂತನಾದೆ ನಿನ್ನ ದಯ
ಒಂದೆ ಸಾಕು ನಿತ್ಯಕು.
ಯೇಸು ನಿನ್ನಲೇ ವಿಶ್ರಾಂತಿ
ಸಮಾಧಾನ ಹೊಂದಿದೆ
ಕಡೆವರೆಗಿನ್ನು ಕಾಂತಿ
ದಯಮಾಡು ಯೇಸುವೆ.

Verse 2

ನಿನ್ನ ಕೈಗೆ ತಪ್ಪಿ ಹೋಗಿ
ದೂರವಾದೆ ನಿನಗೆ.
ಕಾಡಿನಲ್ಲಿ ಬಡರೋಗಿ
ಆಗಿಬಿದ್ದೆ ಅಲ್ಲಿಯೆ
ನಿನ್ನ ದೊಡ್ಡ ದಯದಿಂದ
ಗೊಲ್ಗೊಥೆಂಬ ಸ್ಥಳವ
ಕಂಡು ನಿನ್ನ ಕ್ರೂಜೆಯಿಂದ
ಪಡಕೊಂಡೆ ಶಾಂತಿಯ.

Go to top