Verse 1

ಶಾಂತಿಯ ಶಾಂತಿಯ ಯೇಸುವಿನಿಂದ
ಶುದ್ಧಾತ್ಮಗೆ ತಂದೆಯು ಕೊಡುವನು.
ಭಕ್ತರು ಶಾಂತಿಯ ಹೊಂದಿದರಿಂದ
ಕ್ರಿಸ್ತ್ಯೇಸುವಿನೈಕ್ಯದಿ ಹರ್ಷಿಪರು.
ಪ್ರಪಂಚದ ಭೋಗಿಗೆ ಶಾಂತಿಯು ಇಲ್ಲ
ಸದ್ಭಕ್ತನ ಶಾಂತಿಯು ತೀರುವದಿಲ್ಲ.

Verse 2

ಶಾಂತಿಯು ಬಯ್ಸುವ ನೀ ಮೊದಲಾಗಿ
ವಿಶ್ವಾಸಿಸಿ ದೃಷ್ಟಿಸು ಯೇಸುವನು
ಧ್ಯಾನಿಸು ಯೇಸುವನಚಲವಾಗಿ
ಅಸಂಹಿಸು ಸ್ವಾರ್ಥದ ಮಾಯೆಯನು
ಉಂಟಾತನ ದಾಸನಿಗುತ್ತಮ ಶಾಂತಿ
ಯಥಾರ್ಥವೈರಾಗಿಗೆ ಸತ್ಯ ವಿಶ್ರಾಂತಿ.

Verse 3

ದುಷ್ಟ ಅನಾಥರ ರಕ್ಷಣೆಗಾಗಿ
ಕ್ರಿಸ್ತ್ಯೇಸುವ ಶಾಪವತಾಳಿದನು
ಕಳ್ಳರ ನಡುವೆ ತೂಗಿರಲಾಗಿ
ಅಘೋರ ಸಂತಾಪವು ಪೀಡಿಸಿತು.
ಆ ಗಾಯದಿಂದೇರಿತು ಶಾಂತಿಯ ಜಲ
ಆ ಮರದಿ ಹುಟ್ಟಿತು ಶಾಂತಿಯ ಫಲ.

Verse 4

ಶಾಂತಿಯ ರಾಜಕೃತಜ್ಞತೆಯಿಂದ
ನಿನ್ನಾಳುಗಳಾದೆವು ಸ್ವೀಕರಿಸು
ಕ್ರಿಸ್ತನ ವಾಕ್ಯದ ಖಡುಗದಿಂದ
ನಮ್ಮರಿಯ ಸಂಗಡ ಹೋರುವೆವು.
ನಿನ್ನಾಳಿಗೆ ರಾಜನೆ ಇರದು ಭಯ
ನೀನಿದ್ದರೆ ತಪ್ಪದು ಶಾಂತರ ಜಯ.

Verse 5

ಯೇಸುವೇ ಶಾಂತಿಯ ಬಂಧನಗಳಿಂದ
ನಮ್ಮಾತ್ಮಗಳಿರಿಸು ಐಕ್ಯದಲ್ಲಿ
ಆಗ ಅಚಂಚಲ ನಂಬಿಕೆಯಿಂದ
ನಿಂತಿರ್ವೆವು ಶಾಂತಿಯ ವಚನದಿ
ಕಡೇಲಿ ಸುಶಾಂತಿಯ ಪಟ್ಟಣದಲ್ಲಿ
ನಮ್ಮೇರಿಸಿ ಸೇರಿಸು ಮಹಿಮೆಲ್ಲಿ.

Go to top