Verse 1

ಶ್ರೀ ಯೇಸುವಿನ ಎದೆ
ಯೋಹಾನನಂತೆಯೆ
ನಾನಾತು ಧನ್ಯನಾಗಿ
ಆರಾಮಗೊಳ್ಳುವೆ.
ಸಂದೇಹ ಚಿಂತೆಪೀಡೆ
ಈ ಲೋಕಲೀಲೆಯು
ಸೈತಾನ ಬಿಡೋ ಬಾಣ
ಇಲ್ಲೇನೂ ತಟ್ಟದು.
ನಾ ಯೇಸುಮರೆ ಹೊಕ್ಕೆ
ಇನ್ನೇನೂ ಬೇಡವು
ಶ್ರೀ ಯೇಸು ಗೈದ ಮುಕ್ತಿ
ಕೊಂಡಾಡ್ವೆ ನಿತ್ಯಕು.

Verse 2

ಶ್ರೀ ಯೇಸುನಾಮದುರ್ಗ
ನಾ ಕಂಡು ಸೇರಿದೆ
ಈ ಲೋಕತಂತ್ರ ಕಾಟ
ತಾತ್ಸಾರ ಮಾಡುವೆ.
ಆಃ ಕೇಳಿರೆಂಥ ಮೇಳ
ಮೇಲ್ಲೋಕಗಾನವೆ
ವಿಜಯಗೊಂಡ ಸೇನೆ
ಸಂಗೀತ ಹಾಡುತೆ.
ನಾ ಯೇಸುಮರೆ ಹೊಕ್ಕೆ
ಇನ್ನೇನೂ ಬೇಡವು
ಶ್ರೀ ಯೇಸು ಗೈದ ಮುಕ್ತಿ
ಕೊಂಡಾಡ್ವೆ ನಿತ್ಯಕು.

Verse 3

ಶ್ರೀ ಯೇಸು ಕೈಗಳಲ್ಲಿ
ಸುಭದ್ರನಾಗಿಯೆ
ನಾನಾತ್ಮ ತೃಪ್ತನಾದೆ
ನಿಶ್ಚಿಂತಬಾಳಿಕೆ.
ಇನ್ನಲ್ಪಕಾಲ ಕಷ್ಟ
ಕಣ್ಣೀರು ಬಂದರು
ನಾ ತಾಳಿಕೊಂಡು ಬೇಗ
ಅ ಮೇಳ ಸೇರ್ವೆನು.
ನಾ ಯೇಸುಮರೆ ಹೊಕ್ಕೆ
ಇನ್ನೇನೂ ಬೇಡವು
ಶ್ರೀ ಯೇಸು ಗೈದ ಮುಕ್ತಿ
ಕೊಂಡಾಡ್ವೆ ನಿತ್ಯಕು.

Go to top