Verse 1

ನಾನೀಗ ಭದ್ರರೇವಿನಲ್ಲಿ
ತಂದಿಟ್ಟೆ ನನ್ನ ಹಡಗ
ಕ್ರಿಸ್ತ್ಯೇಸು ರಕ್ತಗಾಯದಲ್ಲಿ
ಹಾಕಿಟ್ಟೆ ನನ್ನ ಲಂಗರ.
ಭೂಪರಲೋಕ ಬಿದ್ದರು
ನಾನೇನೂ ಭಯ ಪಡೆನು.

Verse 2

ಯೆಹೋವನನುಗ್ರಹವನ್ನು
ಶೋಧಿಸ ಯಾರಿಂದಾದೀತು?
ಆ ಆನುಗ್ರಹ ಪಾಪಿಯನ್ನು
ಕಟಾಕ್ಷಿಸೋದು ನಿತ್ಯಕು.
ಪಾಪಿಷ್ಠ ನೆಡವಿದರು
ದಿವ್ಯಾನುಗ್ರಹ ತೀರದು.

Verse 3

ನಿತ್ಯಾನುಗ್ರಹಪೂರ್ತಿಯಿಂದ
ಕ್ರೂಜೇಲಿ ಯೇಸು ಸತ್ತನು
ದೇವಾತ್ಮ ಅನುಗ್ರಹದಿಂದ
ನಂಗ್ಹಿತ ಶಿಕ್ಷೆ ಕೊಡೊದು
ಅನಾದಿಯಿಂದ ತಂದೆಯು
ನಂಗೊಲೆಯುತ್ತಲಿದ್ದನು.

Verse 4

ಪಾಪಂಗಳನ್ನು ತೊಳೆವಂಥ
ಪವಿತ್ರವಾದ ನೆತ್ತರೇ
ಗಾಯಂಗಳನ್ನು ಮಾಯ್ಸುವಂಥ
ಸ್ವರ್ಗೀಯ ಶುದ್ಧಲೇಪವೇ
ದೇವಾನುಗ್ರಹ ನನಗೆ
ನಿನ್ನಿಂದ ಪ್ರಾಪ್ತವಾದದೆ.

Verse 5

ಈ ರಕ್ತದ ಪ್ರವಾಹದಲ್ಲಿ
ವಿಶ್ವಾಸಸ್ನಾನ ಮಾಡುವೆ.
ಈ ರಕ್ತ ನನ್ನ ಹಣೆಯಲ್ಲಿ
ಗುರ್ತಾಗಿ ಕಾಣಿಸಿದರೆ
ದೇವಾನುಗ್ರಹವೆಂದಿಗು
ನನ್ನನ್ನು ಬಿಡಲಾರದು.

Verse 6

ಈ ಮಾರ್ಗದಲ್ಲಿ ನಡದೇನು
ಭೂವಾಸ ಮಾಡೊ ವರೆಗೆ
ಈ ಮರ್ಮವನ್ನು ಧ್ಯಾನಿಸೇನು
ನನ್ನುಸುರಾಡೊ ಮಟ್ಟಿಗೆ.
ದೇವಾನುಗ್ರಹ ನನಗೆ
ನಿರಂತ ನಿಜ ಮುಕ್ತಿಯೇ.

Go to top