Verse 1

ಕಟಾಕ್ಷ ನಾನು ಹೊಂದಿದ್ದೇನೆ
ಇದೇನು ನನ್ನ ಪುಣ್ಯವೊ?
ಆಶ್ಚರ್ಯವೆಂದು ಹೇಳುತ್ತೇನೆ
ನಾ ಕೃಪೆಯಾಶಿಸಿದೆನೋ?
ಕಟಾಕ್ಷವನ್ನು ನೆನೆದು
ಕೊಂಡಾಡುತ್ತೇನೆ ನಿತ್ಯಕು.

Verse 2

ನಾ ದೇವ ಕೋಪ ಪಾತ್ರನಾಗಿ
ಪಾತಾಳ ಪುತ್ರನಾದೆನು
ಕ್ರಿಸ್ತ್ಯೇಸು ರಕ್ತ ನನಗಾಗಿ
ಕಾರುಣ್ಯವೆಂದು ಕೂಗಿತು.
ಕಟಾಕ್ಷವನ್ನು ನೆನೆದು
ಕೊಂಡಾಡುತೇನೆ ನಿತ್ಯಕು.

Verse 3

ಮನುಷ್ಯರನ್ನ ಕೇಳುವಾಗ
ನಾ ದೇವಕೃಪೆ ಸಾರುವೆ
ಇದೊಂದೆ ನನ್ನ ನಿತ್ಯರಾಗ
ನಾ ಕೃಪೆಯಿಂದ ಜೈಸಿದೆ.
ಕಟಾಕ್ಷವನ್ನು ನೆನದು
ಕೊಂಡಾಡುತ್ತೇನೆ ನಿತ್ಯಕು.

Verse 4

ಈ ಕೃಪೆಯಂ ಲೋಕಾಧಿಕಾರ
ನನ್ನಿಂದ ನೀಗಲಾರದು
ಇದೆನ್ನ ಪಾಪಪರಿಹಾರ
ಇದೆನ್ನ ನಿತ್ಯಮೋಕ್ಷವು.
ಕಟಾಕ್ಷವನ್ನು ನೆನೆದು
ಕೊಂಡಾಡುತ್ತೇನೆ ನಿತ್ಯಕು.

Verse 5

ದಯಾತ್ಮನಾದ ದಿವ್ಯ ತಂದೆ
ಕಟಾಕ್ಷ ಬಿಡಬೇಡವು
ಕ್ರಿಸ್ತೇಸುನಾಮದಲ್ಲಿ ಬಂದೆ
ವಿಮುಕ್ತಿ ದಯಪಾಲಿಸು.
ಕಟಾಕ್ಷ ಪೂರ್ತಿ ನೆನೆದು
ಕೊಂಡಾಡುತೇನೆ ನಿತ್ಯಕು.

Go to top