Verse 1

ಸಂರಕ್ಷೆ ಬಂದದೆಮಗೆ
ಬರೇ ಕಟಾಕ್ಷದಿಂದ.
ಉಂಟಾಗದೆಂದು ಪ್ರಾಣಕೆ
ಸಹಾಯ ಕ್ರಿಯೆಯಿಂದ.
ವಿಶ್ವಾಸ ಕಾಣ್ಬುದ್ಯೇಸುವ
ಕೊಂಡ್ಹೋದನೀತ ಶಾಪವ
ಮಧ್ಯಸ್ಥನೀತನಾದ.

Verse 2

ದಿವ್ಯಾಜ್ಞೆ ಸಾಧಿಸೋದಕೆ
ಸಮರ್ಥರಾರು ಇಲ್ಲ
ಹೀಗಾಗಿ ಬಂದ ವ್ಯಥೆಗೆ
ಪ್ರಮಾಣವಿರಲಿಲ್ಲ.
ದಿವ್ಯಾಜ್ಞೆಗಾತ್ಮ ಮೆಚ್ಚದೆ
ಮಾಂಸಾಶೆಯೊಳಗಿರಲೆ
ನಾವೆಲ್ಲ ಕೆಟ್ಟೆವಯ್ಯ.

Verse 3

ದೇವಾಜ್ಞೆಯನುಸರಿಸ
ಸಾಮರ್ಥ್ಯ ಸ್ವೇಚ್ಛೆಯಲ್ಲಿ
ಉಂಟೆಂಬ ಮೋಸ ಪ್ರಬಲ
ಮರ್ಳಾದ ನರರಲ್ಲಿ.
ನಮ್ಮೊಳಗಿರ್ವ ದುಸ್ಥಿತಿ
ತೋರ್ಪಡಿಸುವ ಕನ್ನಡಿ
ಎಂಬಂತೆ ದೇವರಾಜ್ಞೆ.

Verse 4

ದುರ್ಭಾವ ಸ್ವಂತ ಶಕ್ತಿಯಿಂ
ಬಿಡೋದಸಾಧ್ಯವಾಯ್ತು
ದುಷ್ಕರ್ಮ ವ್ಯರ್ಥಯತ್ನದಿಂ
ಭೂಮಿಲಿ ಮಿಗಿಲಾಯ್ತು.
ಸ್ವಪುಣ್ಯ ಮಿಥ್ಯ ಶಪಿತ
ನರಂಗೆ ಪಾಪಕಲ್ಮಷ
ಸಜಾತವಾದ ದೋಷ.

Verse 5

ಆದಾಗ್ಯೂ ನೇಮ ನಡಿಸ
ಯಾರಿಲ್ಲದಿರಲಾಗಿ
ಮನುಷ್ಯರೆಲ್ಲ ಕೆಡದ
ಹಾಗವತಾರವಾಗಿ
ಕ್ರಿಸ್ತ್ಯೇಸು ಹುಟ್ಟಿ ನಮ್ಮಲಿ
ಬಂದೆಲವನ್ನು ನಡಿಸಿ
ತಾ ಪ್ರಾಯಶ್ಚಿತ್ತ ಗೈದ.

Verse 6

ನನ್ನತಿಪ್ರಿಯ ಯೇಸುವೇ
ನೀನೆಲ್ಲ ಸಾಲ ತೆತ್ತೆ
ನೀ ಸತ್ತು ಹೋದ್ದರಿಂದಲೇ
ನಾ ಸಾವಿಂದ ಎದ್ದೆ.
ನಾನಿನ್ನು ಮೇಲೆ ನಿನಗೆ
ಸದ್ಭಕ್ತಿಯಿಂದ ನಡೆವೆ
ನೀ ಮುಕ್ತಿಯನ್ನು ಕೊಡು.

Go to top