Verse 1

ಕ್ರೂಜೆ ಹತ್ರ ಹೋಗಲಾಗಿ
ಸಿಕ್ಕುತಾಶೀರ್ವಾದವು
ಯೇಸುವನ್ನು ಬೇಡಲಾಗಿ
ಜೀವಕಾಂತಿ ತಪ್ಪದು.

Verse 2

ಅಲ್ಲೇ ನಿಂತು ನೋಡುತೇನೆ
ದಿವ್ಯ ರಕ್ತಧಾರೆಯಂ
ನಾನು ಬೇಡಿ ಹೊಂದಿದ್ದೇನೆ
ಆತ್ಮಕಿಂಪು ಶಾಂತಿಯಂ.

Verse 3

ಅಲ್ಲೇ ನಿಲ್ಲೊದೆಂಥ ಭಾಗ್ಯ
ಯೇಸು ಕಾಣ್ಬನೆನ್ನನು
ಆತನಿಂದಲೇ ಸೌಭಾಗ್ಯ
ನನಗಲ್ಲಿ ಸಿಕ್ಕಿತು.

Verse 4

ನಿನ್ನ ಮೇಲೆ ನನ್ನ ಧ್ಯಾನ
ಸ್ಥಿರ ಮಾಡು ರಕ್ಷಕಾ
ನಿತ್ಯ ಜೀವ ಸಮಾಧಾನ
ಕಾಣಮಾಡು ಒಡೆಯಾ.

Go to top