Verse 1

ಸದ್ವಿಶ್ವಾಸ ಸ್ಥೈರ್ಯವನ್ನು
ಗಟ್ಟಿಯಾದ ಧೈರ್ಯವನ್ನು
ಪೂರ್ಣವಾದ ನಂಬಿಕೆ
ಅಪ್ಪ ಕೊಡು ನನಗೆ.

Verse 2

ಆಗ ಬಿರುಗಾಳಿಯಲ್ಲಿ
ಘೋರ ಬೆಂಕಿಯುರಿಯಲ್ಲಿ
ಅಪಧೈರ್ಯ ಪಡದೆ
ನಿಲ್ಲುವೆ ಅಲ್ಲಾಡದೆ.

Verse 3

ಕಡಲುಕ್ಕೆ ನೀನೇ ಅಂಡೆ
ನೀನು ಕದಲದ ಬಂಡೆ
ಹೊಕ್ಕು ನಿನ್ನ ಶರಣ
ಉಳಿಸೇನು ಪ್ರಾಣವ.

Verse 4

ಘೋರ ತೆರೇ ನೊರೆ ಏರಿ
ಮೇಲೆ ಬೀಳೆ ಬಂಡೆ ಸೇರಿ
ಕೊಂಡು ನಿಂತು ಭದ್ರದಿ
ಮುಣುಗೆನಗಾಧದಿ.

Verse 5

ದುಸ್ಸಂದೇಹ ಭಾವವನ್ನು
ದುಷ್ಟ ಚಂಚಲಾತ್ಮವನ್ನು
ನನ್ನೊಳಿಂದ ತೆಗೆದು
ದಿಟ್ಟ ಗುಣ ಹುಟ್ಟಿಸು.

Go to top