Verse 1

ದೇವದತ್ತ ಶಕ್ತಿಯಾದ
ಸದ್ವಿಶ್ವಾಸ ಯಾವದು?
ಅಂಥ ದೇವರ ಪ್ರಸಾದ
ಹ್ಯಾಗೆ ಪ್ರಾಪ್ತಿಯಾಗೊದು?

Verse 2

ಕೂಸು ತನ್ನ ತಾಯಿಯನ್ನು
ಹ್ಯಾಗೆ ನಂಬುತಿಹುದೋ
ಹಾಗೆ ನೀನು ಯೇಸುವನ್ನು
ಬಾಲನಂತೆ ಅಪ್ಪಿಕೋ.

Verse 3

ನೋಡು ನೋಡು ಕ್ರಿಸ್ತನಿಂದ
ಬಿಡುಗಡೆ ಪಾಪಿಗೆ.
ಅಗೋ ಅಲ್ಲಿ ಕ್ರೂಜೆಯಿಂದ
ಲೋಕದ ವಿಮೋಚನೆ.

Verse 4

ಕ್ರೂಜೆ ಸ್ಥಿರವಾಗಿ ನೋಡಿ
ಅದನ್ನಾತುಕೊಂಬೊದು
ಆಸರವೆಂತಲ್ಲಿಗೋಡಿ
ಸೇರೋದೇ ವಿಶ್ವಾಸವು.

Verse 5

ನಿನ್ನ ಮನ ಪಾಪದಿಂದ
ಕಪ್ಪು ಬಣ್ಣವಾದರು
ಕ್ಷಣದಲ್ಲಿ ಕ್ರಿಸ್ತನಿಂದ
ಬಿಳೀ ಬಣ್ಣವಾಗೊದು.

Verse 6

ಜೀವರಾಜಸಾವಿನಿಂದ
ನಿಂಗೆ ಸಾವು ತಪ್ಪಿತು.
ಮೇಲಕೇರಿದಾತನಿಂದ
ಜೀವದಾತ್ಮ ಸಿಕ್ಕೊದು.

Verse 7

ಇನ್ನು ವೈರಿಗಂಜೋದೇಕೆ?
ಕ್ರಿಸ್ತನಿಂದ ಸೋತನು.
ನನ್ನಿಂದಾಗದನ್ನೋದೇಕೆ?
ಯೇಸುವಿಗೆ ಪ್ರಾರ್ಥಿಸು.

Verse 8

ಆತಗುಂಟು ಸರ್ವತ್ರಾಣ
ಆತ ಪ್ರೀತಿಸಾಗರ
ಆತ ನೀತಿಯಜಮಾನ
ಆತನೇ ವಿಮೋಚಕ.

Verse 9

ಆತನದನೆಲ್ಲವನ್ನು
ದಯದಿಂದ ಕೊಡುವ
ಚಾಚು ಹೊಂದಲಿಕ್ಕದನ್ನು
ಸದ್ವಿಶ್ವಾಸ ಹಸ್ತವ.

Go to top