Verse 1

ಪಾಪಂಗಳ ಸಾಲ
ಸಲ್ಲಿಸೊದುಂಟೋ?
ವಿಚಾರಣೇ ಕಾಲ
ಬಿಟ್ಠೋಗುವದೋ?
ಸ್ವಶಕ್ತಿಯಿಂದಲ್ಲ
ವಿಮೋಚನೆಯು.
ಶ್ರೀ ಕ್ರಿಸ್ತನಿಂದೆಲ್ಲ
ಪಾರಾಗುವದು.

Verse 2

ತಾ ಜಾಮಿನು ನಿಂತು
ಹೊರಾಡಿದನು.
ಪಾಪಿಷ್ಠರನ್ನಿಂತು
ಕಾಪಾಡಿದನು.
ಅಚಂಚಲವಾಗಿ
ವಿಶ್ವಾಸಿಸುವೆ.
ಸುರಕ್ಷಿತನಾಗಿ
ಸಂತೋಷಿಸುವೆ.

Verse 3

ಶ್ರೀ ಯಾಜಕನಾಗಿ
ವಿಜ್ಞಾಪಿಸುವ
ನ್ಯಾಯಾಧಿಪನಾಗಿ
ಮುಂಬಪ್ಪವನ
ವಿಶ್ವಾಸದಿಂ ಬಾಗಿ
ಬಿನ್ನೈಸುವೆನು.
ಸಮಾಧಾನವಾಗಿ
ನಾ ಸಾಯುವೆನು.

Go to top