Verse 1

ಯೇಸುವನ್ನು ನೋಡು
ಸೋತ ಪಾಪಿಯೇ
ನಿನ್ನ ಪಾಪವೆಲ್ಲ
ಹೊತ್ತನಲ್ಲವೇ?
ನಿನಗಾಗಿ ಯೇಸು
ಬಾಧೆ ಪಟ್ಟನು
ಯೇಸುವನ್ನು ನೋಡಿ
ನಂಬಿ ಜೀವಿಸು.

Verse 2

ಯೇಸುವನ್ನು ನೋಡು
ಯುದ್ಧದೊಳಗೆ.
ಶತ್ರುಬಲ ಸುತ್ತ
ಮುತ್ತಿ ಬಂದರೆ
ಅಲ್ಪತ್ರಾಣಿ ಹೋರು
ವಾಕ್ಯಶಸ್ತ್ರದಿ.
ಯೇಸುವನ್ನು ನೋಡಿ
ನಂಬಿ ಗೆಲ್ಲುವಿ.

Verse 3

ಯೇಸುವನ್ನು ನೋಡು
ನಿನ್ನ ಕಾರ್ಯದಿ
ಒಳ್ಳೇ ಬೀಜ ಬಿತ್ತು
ಮುಂದೆ ಕೊಯ್ಯುವಿ.
ಗೇಯುವವಗಾತ
ಅನ್ನ ಕೊಡನೇ
ಯೇಸುವನ್ನು ನೋಡಿ
ಮಾಡು ಬಿತ್ತನೆ.

Verse 4

ಯೇಸುಕ್ರೂಜೆ ನೋಡು
ನನ್ನ ಪ್ರಾಣವೆ
ಮೇಲೆ ಮೇಜುವಾನಿ
ಸಿದ್ಧವಾಗಿದೆ.
ಗೇದು ಗೆದ್ದ ಮೇಲೆ
ಪರಲೋಕದಿ
ಯೇಸು ಮುಖವನ್ನು
ನಿತ್ಯ ನೋಡುವಿ.

Go to top