Verse 1

ಕ್ರಿಸ್ತ ನಿತ್ಯಶೈಲವೆ
ಶರಣಾಗು ನನಗೆ.
ನಿನ್ನ ಪಕ್ಕೇ ರಕ್ತದಿ
ಮನಶುದ್ದಿಯಾಗಲಿ.
ಪಾಪ ಜೈಸೊ ಶಕ್ತಿಯ
ಹುಟ್ಟಿಸೋದೀ ನೆತ್ತರ.

Verse 2

ಆಜ್ಞೆಗನುಸಾರವು
ನಾನು ನಡಕೊಳ್ಳಲು
ಎಷ್ಟು ಯತ್ನ ಪಟ್ಟರೂ
ಬಿಕ್ಕಿ ಬಿಕ್ಕಿ ಅತ್ತರೂ
ನನ್ನ ಪಾಪ ಹೋಗದು
ನಿನ್ನ ಕೃಪೆ ಗತಿಯು.

Verse 3

ಪುಣ್ಯವೇನು ತಾರದೆ
ನಿನ್ನ ಕ್ರೂಜೆಗಂಟುವೆ.
ಕೃಪೆದೋರು ರಕ್ಷಕ
ನೀಡು ನೀತಿವಸ್ತ್ರವ.
ಸಾಯುವಂಥ ನನಗೆ
ಜೀವವೀಯು ಕರ್ತನೆ.

Verse 4

ಜೀವವಿರ್ವ ಮಟ್ಟಿಗೂ
ಯಾತ್ರೆ ತೀರಿದಾಗಲೂ
ಸಾಯೋ ಕಷ್ಟದಲ್ಲಿಯೂ
ನ್ಯಾಯತೀರ್ಪಿನೊಳಗೂ
ಕ್ರಿಸ್ತ ನಿತ್ಯಶೈಲವೆ
ಶರಣಾಗು ನನಗೆ.

Go to top