Verse 1

ಇದ್ದಂತೆ ಬಂದೆ ಯೇಸುವೆ
ಎದ್ದೇಳು ಬಾ ಈ ಅಪ್ಪಣೆ
ನೀನಾಗಿ ಕೊಟ್ಟಿ ಕರ್ತನೇ
ಕ್ರೂಜೇಲಿ ನೊಂದ ಯೇಸುವೇ.

Verse 2

ನಾ ಕುರ್ಡ ಮರ್ತ್ಯ ದಯದಿ
ಬೇಕಾದದೆಲ್ಲ ಕೊಡುವಿ
ಇದ್ದಂತೆ ಬಂದೆ ವೈದ್ಯನೇ
ಕ್ರೂಜೇಲಿ ನೊಂದ ಯೇಸುವೇ.

Verse 3

ನೀನಾದಿ ಪಾಪಯಾಗವು
ನಾ ನಂಬಿ ಕ್ಷಮೆ ಕೇಳ್ವೆನು
ಇದ್ದಂತೆ ಬಂದೆ ಸ್ವಾಮಿಯೇ
ಕ್ರೂಜೇಲಿ ನೊಂದ ಯೆಸುವೇ.

Verse 4

ಕಾರುಣ್ಯಮೂರ್ತಿ ಲಾಲಿಸು
ಈ ರೋಗಿಯನ್ನು ರಕ್ಷಿಸು
ಇದ್ದಂತೆ ಬಂದೆ ಮಿತ್ರನೇ
ಕ್ರೂಜೇಲಿ ನೊಂದ ಯೇಸುವೇ.

Go to top