Verse 1

ನನ್ನ ದಯೆಯುಳ್ಳ ಮಿತ್ರ
ನನ್ನ ಪ್ರಿಯ ರಕ್ಷಕಾ
ಪ್ರೀತಿಯಿಂದ ನೀ ಪವಿತ್ರ
ನನ್ನ ಶುದ್ಧ ಮಾಡ ಬಾ.

Verse 2

ದೊಡ್ಡ ಪಾಪಹೊರೆಯನ್ನು
ಪರಿಹರಿಸ್ಯೇಸುವೇ
ದುಷ್ಟನಧಿಕಾರವನ್ನು
ಮುರಿಧಾಕು ಶಕ್ತನೇ.

Verse 3

ನಾನು ರೋಗಿ ತ್ರಾಣವನ್ನು
ದಯೆಪಾಲಿಸೆನಗೆ
ಸಾಯುತ್ತೇನೆ ಪ್ರಾಣವನ್ನು
ಕೊಡುಎದ್ದ ಯೇಸುವೇ.

Verse 4

ನಿನ್ನ ದಿವ್ಯ ಆತ್ಮಸ್ನಾನ
ಮಾಡಿಸೆನ್ನ ಆತ್ಮಕೆ
ನಿನ್ನ ಜೀವದನ್ನಪಾನ
ಬಡಿಸಯ್ಯ ದೀನಗೆ.

Go to top