Verse 1

ಸುನೀತಿ ಸೂರ್ಯನಾದ
ಸಜ್ಜೀವಬೆಳಕೆ
ಕಟಾಕ್ಷಪೂರ್ತಿಯಾದ
ಕ್ರಿಸ್ತ್ಯೇಸು ಕರ್ತನೆ
ಕೊಡಯ್ಯ ಜೀವವನ್ನು
ಸುಜ್ಞಾನ ಬೆಳಕನು
ಕೆಟ್ಠೋದ ಪಾಪಿಗೆ.

Verse 2

ನನ್ನಘರಾಶಿಯನ್ನು
ನೀ ಮನ್ನಿಸೆನಗೆ
ಬಿಟ್ಟೆಲ್ಲ ಕೋಪವನ್ನು
ಬಾ ಬಾ ಸಹಾಯಕೆ
ನೀ ಕೊಟ್ಟ ಸಮಾಧಾನ
ನನ್ನಾತ್ಮಕನ್ನಪಾನ
ಆಲೈಸೊ ಕರ್ತನೇ.

Verse 3

ನನ್ನಾತ್ಮದೊಳಗಿಂದ
ನೀ ದುಷ್ಟ ಗುಣವ
ಕಿತ್ಹಾಕಿ ಇಂದಿನಿಂದ
ನಾ ನಿನ್ನ ಪರಮ
ಸುಭಕ್ತಿಯನ್ನು ಮಾಡ
ಸುರಾಗವೆತ್ತಿ ಹಾಡ
ಕೊಡಭಿಲಾಷೆಯ.

Verse 4

ಆತ್ಮಾಪ್ತ ಜ್ಞಾನವನ್ನ
ಹೆಚ್ಚಾಗಿ ಕಳುಹು
ಸದ್ವಾಕ್ಯದಿಂದ ನನ್ನ
ಸಂಪೂರ್ಣ ವ್ಯಾಪಿಸು
ವಿಶ್ವಾಸದೈಕ್ಯದಲ್ಲಿ
ಸಹೋದ್ರ ಪ್ರೀತಿಯಲ್ಲಿ
ಸಂವರ್ಧಿಸೆನ್ನನು.

Verse 5

ನಾ ನಿನ್ನ ವಶವಾಗಿ
ದುರಾಶೆ ತ್ಯಜಿಸಿ
ಪಾಪಕ್ಕೆ ಮೃತನಾಗಿ
ನಿನ್ನಲ್ಲಿ ಬಾಳಲಿ
ನಿನ್ನೈಕ್ಯವೆನ್ನ ಗುರಿ
ನಾ ತಾಳ್ವೆ ಕ್ರೂಜೆಯುರಿ
ನೀ ಕೊಟ್ಟ ಬಲದಿ.

Verse 6

ನಾನಾಗದಂತೆ ಭ್ರಷ್ಟ
ನನ್ನನ್ನು ದೃಷ್ಟಿಸು
ನನ್ನಾಳ್ಮ ಆತ್ಮನಷ್ಟ
ನಾ ಪಡಬಾರದು
ನಿನ್ನಾಜ್ಞೆಯರ್ಥವನ್ನು
ಪೂರೈಸ ಶಕ್ತಿಯನ್ನು
ಕೊಟ್ಟೆನ್ನ ಸಲಹು.

Go to top