Verse 1

ಯೇಸು ಕ್ರಿಸ್ತನೇ
ಮಧ್ಯವರ್ತಿಯೇ
ನೀನು ತಾಳಿ ನನ್ನ ಶಾಪ
ಹೊತ್ತುಕೊಂಡು ನನ್ನ ಪಾಪ
ಪ್ರಾಯಶ್ಚಿತ್ತವ
ಕೊಟ್ಟಿ ರಕ್ಷಕ.

Verse 2

ನಿನ್ನ ಮೇಲೆಯೆ
ನನ್ನ ಕೋರಿಕೆ
ನಿನ್ನ ಹೊರ್ತು ಗತಿಯಿಲ್ಲ
ನೀನೆನ್ನನ್ನು ಬಿಡೊದಿಲ್ಲ
ನಿನ್ನ ರಕ್ತವು
ನನ್ನಾಧಾರವು.

Verse 3

ಸಾಲ ದೊಡ್ಡದು
ತೆರಲಾರೆನು.
ನೀನು ಹೊಣೆಗಾರನಾಗಿ
ನೀಚ ನನ್ನ ಬದಲಾಗಿ
ತೆತ್ತಿ ಸಾಲವ
ಕೊಡು ಮುಕ್ತಿಯ.

Verse 4

ಚಾಚಿ ಕೈಯನು
ತಪ್ಪಿಸೆನ್ನನು
ನರಕದ ಬೆಂಕಿಯಿಂದ
ಮೃತಿಕರ ರೋಗದಿಂದ
ಗುಣ ಪಡಿಸು
ನೀನೆ ವೈದ್ಯನು.

Verse 5

ನಾನು ಹೇಸುವ
ಹೊಲೆ ವಸ್ತ್ರವ
ಯೇಸುವೆ ನನ್ನಿಂದ ಕಳೆ
ನಿನ್ನ ರಕ್ತದಲ್ಲಿ
ತೊಳೆ ನನ್ನ ಹೃದವ
ಬಿಳಿ ವಸ್ತ್ರ ತಾ.

Verse 6

ದಿವ್ಯ ಕೋಪದ
ಉಗ್ರಜ್ವಾಲೆಯ
ತಾಳಿಕೊಂಡು ಜಾಮಿನಾಗಿ
ಅರಿಸಿನ್ನು ಕೃಪೆಯಾಗಿ
ನರಕಾಗ್ನಿಗು
ತಪ್ಪಿಸೆನ್ನನ್ನು.

Go to top