Verse 1

ದೇವರೇ ಕಟಾಕ್ಷವುಳ್ಳ
ಕಾರುಣ್ಯ ತಾಳ್ಮೆ ಕ್ಷಮೆಯುಳ್ಳ
ಕೃಪಾಳು ಪ್ರೀತಿಯಬ್ಧಿಯೇ.
ಘೋರ ಪಾಪಮಲಕಾಗಿ
ಅಸಂಖ್ಯ ಕರ್ಮರಾಶಿಗಾಗಿ
ನಾ ಸುಯ್ಯುತೇನೆ ಆಳ್ಮೆನೇ.
ನಾ ಪಾಪಿಯೆ ಅಯ್ಯೋ
ನೀ ಕರ್ತ ದೃಷ್ಟಿಸೋ
ನಿನ್ನ ದಯ
ನಾ ತಳ್ಳಿದೆ
ನನ್ನೀಶನೇ
ನಿನ್ನನ್ನಸಡ್ಡೆ ಮಾಡಿದೆ.

Verse 2

ಕ್ಷಮಿಸು ಈ ಕರ್ಮವನ್ನು
ನೀ ಕರ್ತ ಮಾಡಲುಗ್ರವನ್ನು
ಯಾರುಳಿದಾರು ಲೋಕದಿ?
ನಿನ್ನ ಪ್ರೀತಿ ಎಳವನ್ನು
ಅಲಕ್ಷ ಮಾಡೋ ಮನಸನ್ನು
ಕಾರ್ಗತ್ತಲಿಂಗೆ ದೊಬ್ಬುವಿ.
ನೀ ತಂದೆ ಕ್ಷಮಿಸು
ಭಯಾತ್ಮಗುಳಿಸು
ನಿನ್ನ ದಯ
ಹೃತ್ಪೀಡೆಯಿಂ
ವಿನಾಶದಿಂ
ಕಾಪಾಡೆನ್ನನ್ನು ಕೃಪೆಯಿಂ.

Verse 3

ಇರ್ವೆನಂಧಕಾರದಲ್ಲಿ
ನೀನೆನ್ನ ಎದೆಗುಂಡಿಯಲ್ಲಿ
ಪ್ರಕಾಶ ಕೊಡದಿದ್ದರೆ.
ಪಾಪಭ್ರಮೆ ಬಿಡೊದಿಲ್ಲ
ನವೀನ ಭಾವ ಹುಟ್ಟೊದಿಲ್ಲ.
ನಿನ್ನಾತ್ಮ ವೃತ್ತಿ ಗೈಯದೆ.
ನನ್ನಪ್ಪ ನಡಿಸು
ಕೈ ಬಿಡಬಾರದು
ಕ್ರಿಸ್ತನೊಲ್ಮೆ
ಸುಬೋಧನೆ
ನಂಗಿತ್ತರೆ
ಅಂಧತ್ವ ಹಾರಿಹೋಗುತೆ.

Verse 4

ದಯ ಹೊಂದದಿರುವಾಗ
ದುರ್ಮಾರ್ಗದಲ್ಲಿ ಹೋಗುವಾಗ
ನಾ ಪಾಪಗ್ರಸ್ತ ನಿಜವೆ.
ಜೀವಸತ್ವ ಆತ್ಮಜ್ಞಾನ
ಅದೆಲ್ಲ ಕರ್ತ ನಿನ್ನ ದಾನ
ಅದಿಲ್ಲದಿರೆ ಸಾಯುವೆ.
ನನ್ನಾತ್ಮ ಕುಂದುತೆ
ಕೃಪಾಳು ದೇವರೆ
ದಯಮಾಡು
ನೀ ವೈದ್ಯನು
ನಾ ರೋಗಿಯು
ನಿನ್ನಿಂದ ವಾಸಿಯಾಹೆನು.

Verse 5

ದಯದಿಂದೆನ್ನಂತಃಪ್ರಾಣ
ಎನ್ನುಡಿ ನಡೆ ಶಕ್ತಿ ತ್ರಾಣ
ನಿ ಕರ್ತ ಶುಚಿ ಪಡಿಸು.
ಇಚ್ಛೆಭ್ರಮೆಕರ್ಮವನ್ನು
ಹುಟ್ಟಿಸೊ ಸ್ವಂತ ಬುದ್ದಿಯನ್ನು
ಕಿತ್ಹಾಕು ಬೇಗ ನನ್ನೊಳು.
ಸದ್ಬಕ್ತಿ ಕಾರ್ಯಕೆ
ಕೊಡೆನ್ನ ಹೃದಕೆ
ಕೃಪಾದಾನ
ಸ್ವಕರ್ಮವು
ಸ್ವಜ್ಞಾನವು
ಸದ್ಗುಣ ಕೊಡಕೂಡದು.

Verse 6

ಕರ್ತನೆ ವಿಶ್ವಾಸಬಲ
ನಿರೀಕ್ಷಾಧಾರ ಪ್ರೀತಿಜಲ
ಉಚಿತ ನಿನ್ನ ವರವೆ.
ಸಮಾಧಾನ ಹೃತ್ಸಂತೋಷ
ವಿಶ್ರಾಂತಿ ಆತ್ಮಜೀವಪೋಷ
ಉದಾರ ನಿನ್ನ ದಯವೆ.
ಕಟಾಕ್ಷವಿದ್ದರೆ
ಸಾಕಾಯ್ತು ನನಗೆ
ನಿನ್ನ ದಯ
ಒಂದಿರಲು
ನಿರಂತ್ರಕು
ಆಧಾರ ನನಗಿರೊದು.

Verse 7

ಕರ್ತ ನೀನು ಕೃಪಾಕರ
ನೀ ಗುಣದಾತ ನ್ಯೂನಹರ
ಕಟಾಕ್ಷ ಧರ್ಮಮೂಲನು.
ಶ್ರಮೆಯನ್ನು ತಾಳೋ ಪ್ರಾಣ
ಸತ್ಕ್ರಿಯೆಯನ್ನು ಗೈವ ತ್ರಾಣ
ವಿಶ್ವಾಸ ನೀತಿಭಕ್ತಿಯು
ಪವಿತ್ರ ಬಾಳಿಕೆ
ಇವೆಲ್ಲವಾಗಿವೆ
ದಯಾಫಲ
ಅದಿರದೆ
ಹೃತ್ಪೀಡೆಯೇ
ಅದಿರೆ ನಿತ್ಯ ಮೋಕ್ಷವೇ.

Verse 8

ನಾವೆ ಗಟ್ಟಿ ಲಂಗ್ರದಿಂದ
ನಿಂತಿರುವಂತೆ ದಯದಿಂದ
ನೀ ದೃಢ ಪಡಿಸೆನ್ನನು.
ಇಹಲೊಕತಾಪತ್ರಯ
ಬಂದಾಗ್ಯೂ ನಿನಗೆನ್ನ ದಯ
ಸಾಕೆಂದು ಧೈರ್ಯಗೊಳಿಸು.
ಕಹ್ಯಾದ ಕಷ್ಟವು
ಮಧುರವಹುದು
ಯೇಸು ನೀನು
ಕೈಕೊಡಲು
ನೀ ಮೆಚ್ಚಲು
ನಾ ನಿತ್ಯವಾಗಿ ತೃಪ್ತನು.

Verse 9

ಹೋಗುವೆಲ್ಲಾ ಸ್ಥಳದಲ್ಲಿ
ನಾ ಕೂಡ್ರುವಲ್ಲಿ ನಿಲ್ಲುವಲ್ಲಿ
ದಿನಾಲು ಹಗಲಿರುಳು
ಜೀವದಲ್ಲು ಮೃತಿಯಲ್ಲು
ನನ್ನನ್ನು ಇಹಪರದಲ್ಲು
ಕಟಾಕ್ಷ ಹಿಂದಟ್ಟಿಪುದು.
ನನ್ನಾಶಾಬಂಧವೂ
ನನ್ನೊಂದೆ ಗತಿಯೂ
ದಯ ಮಾತ್ರ
ನಾ ತೀರುವೆ
ನಿನ್ನಲ್ಲಿಯೆ
ಕಟಾಕ್ಷಮೂಲ ಯೇಸುವೆ.

Go to top