Verse 1

ಬಡ ಪಾಪಿ ನಾನು ಬಂದೆ
ನಿನ್ನ ಮುಂದೆ ದೇವರೆ.
ನೀನೆ ನೀತಿಯುಳ್ಳ ತಂದೆ
ಕೊಡು ಶಾಂತಿಯೆನಗೆ.
ಕೇಳು ನನ್ನ
ಮೊರೆಯನ್ನು
ಭಯಭ್ರಾಂತಿ ಕಾಡುತ್ತೆ.

Verse 2

ತ್ರಾಣ ಕುಂದಿ ನನ್ನ ಭಾರ
ಇನ್ನು ಮೇಲೆ ತಡೆಯೆ.
ಕೊಡು ಪಾಪಪರಿಹಾರ
ಕೊಡು ಪ್ರೀಯ ಯೇಸುವೆ.
ಕೇಳು ನನ್ನ
ಮೊರೆಯನ್ನ
ಪಾಪ ಹತ್ತಿತೆನಗೆ.

Verse 3

ದೇವರಾತ್ಮ ಅಂಧರಲ್ಲಿ
ದಿವ್ಯ ಕಾಂತಿ ಹೊತ್ತಿಸು.
ನನ್ನ ಅಂತರ್ಭಾವದಲ್ಲಿ
ಸೇರಿ ವಾಸಿಸೆಂದಿಗು.
ಕೇಳು ನನ್ನ
ಮೊರೆಯನ್ನು
ನಾನು ಶುದ್ದಿಹೀನನು.

Go to top