Verse 1

ದೇವಶಾಪವು
ಎಷ್ಟಘೋರವು
ನನ್ನ ವಜ್ಜೆ ಎಷ್ಟಪಾರ
ತಾಳಲಾರದಂಥ ಭಾರ
ಎಲ್ಲಿ ಹೋದರು
ಶಾಪ ತಪ್ಪದು.

Verse 2

ನನ್ನ ರೋಗವು
ಗುಣವಾಗದ್ದು
ರಕ್ತ ಸೋರ್ವ ನನ್ನ ಗಾಯ
ಮಾಯೋದಿಲ್ಲ ಏನುಪಾಯ?
ಯಾವ ವೈದ್ಯನು
ವಾಸಿ ಮಾಡೊನು?

Verse 3

ದೇವಬಾಣವು
ನಂಗೆ ನಾಟಿತು.
ಅದು ನನ್ನ ಆತ್ಮದಲ್ಲಿ
ತಿವ್ಯಲಾಗಿ ಕ್ಷೇಮವೆಲ್ಲಿ
ಸಿಕ್ಕೀತೆನಗೆ
ಅಂಬುಗಾಯಕ್ಕೆ?

Verse 4

ಸಮಾಧಾನವು
ಆಗಲೊಲ್ಲದು
ಮನದಲ್ಲಿ ಮಹಾ ಭಯ
ಶರೀರಾತ್ಮಕಾಯ್ತು ಕ್ಷಯ
ನಿನ್ನ ಬೆತ್ತವು
ನಂಗೆ ತಾಗಲು.

Verse 5

ನರಕಾಗ್ನಿಗು
ನಾನು ಪಾತ್ರನು
ನಿತ್ಯ ಮೃತಿಗಾದೆ ಗುರಿ
ನರಕದ ನಿತ್ಯ ಉರಿ
ದಹಿಸುತ್ತದೆ
ಶಾಂತಿ ಕೊಡುವೆ.

Verse 6

ಎಲ್ಲಿ ಹೋಗಲಿ?
ಲೋಕತ್ರಯದಿ
ಯಾರಿಂದಾಗೋದು ಸಹಾಯ?
ನಿನ್ನ ಕೃಪೆಯೇ ಉಪಾಯ
ಸ್ವಾಮಿ ನನ್ನನ್ನು
ನೀ ಕಟಾಕ್ಷಿಸು.

Go to top