Verse 1

ಪರಿಶುದ್ಧನೇ
ನಿತ್ಯ ದೇವರೇ
ನಿನ್ನ ಮುಂದೆ ನಾನು ಬಂದೆ
ನನ್ನ ಪಾಪಭಾರ ತಂದೆ
ನಾನಯೋಗ್ಯನು
ಕೆಟ್ಟ ದಾಸನು.

Verse 2

ಇಷ್ಟು ವರುಷ
ನಿನ್ನ ಆಜ್ಞೆಯ
ಮೀರಿ ನಿನ್ನಸಡ್ಡೆ ಮಾಡಿ
ಪಾಪದಲ್ಲಿ ಹೊರಳಾಡಿ
ಭ್ರಷ್ಟನಾದೆನು
ಬಿಟ್ಟು ನಿನ್ನನು.

Verse 3

ನುಡಿ ನಡೆಯು
ಇಚ್ಛೆಯಾಶೆಯು
ಎಲ್ಲ ಕೇಡಿಗೊಳಗಾಗಿ
ಬರೆ ಪಾಪಮಯವಾಗಿ
ನಿನ್ನ ಹತ್ರವು
ಸಲ್ಲಲಾರವು.

Verse 4

ನನ್ನ ಮನಸು
ಬರೆ ಕತ್ತಲು
ಅದರಲ್ಲಿ ದೇವ ಪ್ರೀತಿ
ಚೊಕ್ಕ ಗುಣ ನ್ಯಾಯ ನೀತಿ
ಕಾಣಲೊಲ್ಲವು
ಬರೆ ಸ್ವೇಚ್ಛೆಯು.

Verse 5

ಸುಳ್ಳು ಕಪಟ
ಕಾಮದಾತುರ
ಕೋಪ ಗರ್ವ ಅಹಂಕಾರ
ಉಪಕಾರಕಪಕಾರ
ಮೋಸ ಕಳವು
ನನ್ನಲಿರೋದು.

Verse 6

ದ್ವೇಷ ಹಗೆಯು
ಚಾಡಿ ಬೈಗಳು
ಹೊಟ್ಟೆಕಿಚ್ಚುಡಂಭ ನ್ಯಾಯ
ವ್ಯರ್ಥವಾದ ಕಾಲವ್ಯಯ
ಲೆಕ್ಕವಿಲ್ಲದೆ
ಪಾಪ ಮಾಡಿದೆ.

Verse 7

ದಿವ್ಯ ತಂದೆಯೆ
ಮಾತು ಕೇಳದೆ
ನಿನಗೆ ವಿರೋಧವಾಗಿ
ಪಾಪ ಮಾಡಿದವನಾಗಿ
ಪುತ್ರನಾಮಕೆ
ನಾನಯೋಗ್ಯನೆ.

Verse 8

ಪಾಪ ನನಗೆ
ಕಡು ರೋಸಿಕೆ
ನನ್ನ ಹೇಸಿಕೊಳ್ಳುತ್ತೇನೆ
ಧೂಳಿಗಂಟಿಕೊಂಡಿದ್ದೇನೆ
ನಾನರಿಷ್ಟನು
ನೋಡು ನನ್ನನ್ನು.

Go to top