Verse 1

ಪವಿತ್ರನೇ
ಅಪಾರವೇ
ನಾ ಮಾಡಿದಂಥ ಪಾಪ
ಸೃಷ್ಟ್ಯೊಳಗೆ
ಯಾರೆನಗೆ
ಸಹಾಯ ಮಾಡಲಾಪ?

Verse 2

ಯಾರಿಂದಲು
ಅದಾಗದು
ನೀನೊಬ್ಬನೆನ್ನ ತಂದೆ
ನೀನೆನ್ನನ್ನು
ಐ ಮನ್ನಿಸು
ನಿನ್ನಾಸರಕ್ಕೆ ಬಂದೆ.

Verse 3

ನನ್ನಪ್ಪನೆ
ಸುದಂಡನೆ
ಕೊಟ್ಟಾಗ್ಯು ಯೇಸುವಲ್ಲಿ
ಸಂಧೈರ್ಯವ
ಸುಶಾಂತಿಯ
ಇಡಂಜುವಾತ್ಮದಲ್ಲಿ.

Verse 4

ನಿನ್ನಲ್ಲಿಯೆ
ವಿಮೋಚನೆ
ನೀ ಕರ್ತ ದಯೆ ಮಾಡು
ನಿನ್ನ್ಯೆಕ್ಯದ
ಸಂತೃಪ್ತಿಯ
ಕೊಟ್ಟಾತ್ಮವಂ ಕಾಪಾಡು.

Verse 5

ಉದ್ಧಾರಕ
ನನ್ನಾಸರ
ನಿನ್ನ್ಯೆದು ಗಾಯದಲ್ಲಿ
ಅಲ್ಲಿಹುದು
ಸುಕ್ಷೇಮವು
ಸಮಸ್ತ ವ್ಯಥೆಯಲ್ಲಿ.

Go to top