Verse 1

ಪಾಪಿಷ್ಠ ನಾನು ತಾಪದ
ಅಗಾಧದಲ್ಲಿದ್ದೇನೆ
ಸಹಾಯ ಮಾಡು ರಕ್ಷಕ
ಐ ಮೊರೆಯಿಡುತ್ತೇನೆ.
ನೀ ಕಿವಿಗೊಟ್ಟು ಕರ್ತನೆ
ಆಲೈಸು ನನ್ನ ಪ್ರಾರ್ಥನೆ
ನಿನ್ನನ್ನು ನಂಬಿದ್ದೇನೆ.

Verse 2

ಪವಿತ್ರನೇ ನೀ ಮಾಡುವ
ವಿಚಾರದಲ್ಲಿ ಯಾರು
ನಿನ್ನೆದುರಲ್ಲಿ ನಿಲ್ಲುವ?
ನಿರಪರಾಧಿ ಯಾರು?
ನೀನೆಮ್ಮ ಪಾಪ ಬಿಡೋದೇ
ನಮ್ಮೊಂದೇ ಗತಿ ಸ್ವಾಮಿಯೇ
ನಿಂಗಂಜದವರ್ಯಾರು?

Verse 3

ನೀನೆನ್ನ ಒಂದೇ ಕೋರಿಕೆ
ನನ್ನಲ್ಲಿ ಪುಣ್ಯವಿಲ್ಲ
ನಾ ನಿನ್ನ ದಾರಿ ನೋಡುವೆ
ನೀನೆನ್ನ ಬಿಡೋದಿಲ್ಲ.
ನೀನಿತ್ತಮೂಲ್ಯ ವಾಕ್ಯವು
ನಿರೀಕ್ಷೆಗಾಯ್ತಾಧಾರವು
ಅದೆಂದೂ ತಪ್ಪೋದಿಲ್ಲ.

Verse 4

ಸಹಾಯ ತಡವಾದರು
ನಾ ಕಾಯುತ್ತಿರುತ್ತೇನೆ.
ಯಾವಾಗ ಹೊತ್ತು ಮೂಡೋದು
ಎಂದೆಚ್ಚರಾಗಿದ್ದೇನೆ.
ತಾನಾಯ್ದ ಸ್ವಂತ ಪ್ರಜೆಯ
ಯೆಹೋವನೆಂದೂ ಮರೆಯ
ಎಂದಾತುಕೊಂಡಿದ್ದೇನೆ.

Verse 5

ನಂಗೆಷ್ಟೊ ಪಾಪವಿದ್ದರು
ಆತಂಗಿನ್ನಷ್ಟು ದಯ.
ನಾ ಕಟ್ಟೆ ಆತಗಿರೋದು
ರಕ್ಷಾಬಲತೀಶಯ
ಯೆಹೋವ ಪ್ರಜಾಪಾಲನು
ಸರ್ವಾಪರಾಧಹರನು
ಆಹಾ! ಇನ್ನ್ಯಾಕೆ ಭಯ?

Go to top