Verse 1

ಮೃತ್ಯುವಿನ ಬಂಧವನ್ನು
ಬಿಡಿಸಿದ ಮನುಜ
ಶತ್ರು ತಂದ ಸೇನೆಯನ್ನು
ಓಡಿಸಿದ ನಾಯಕ.
ತ್ರಾಣದಿಂದ ಲೋಕವಾಳು
ಕ್ರೂಜೆ ತಾಳಿದವನೇ
ಜಯಪ್ರದನಾಗಿ ಬಾಳು
ಘನವುಳ್ಳ ರಾಜನೇ.

Verse 2

ಜಯಶಾಲಿ ಕ್ರಿಸ್ತ ನನ್ನ
ಸೇರಿಸಿಕ್ಕು ದಂಡಿಗೆ
ಡಾಲು ಖಡುಗಂಗಳನ್ನ
ಇಡು ನನ್ನ ಹಸ್ತಕೆ.
ಧೀರ ಯುದ್ಧ ಧ್ವನಿ ಎತ್ತಿ
ನಿನ್ನ ಹೆಜ್ಜೆ ಹಿಡಿದು
ದುಷ್ಟ ವೈರಿ ನಡುನೆತ್ತಿ
ಸೀಳಿ ಜಯಿಸುವೆನು.

Verse 3

ಕ್ಷೇಮವಾಗಿ ಸಾಯುತ್ತೇನೆ
ತಂದೆಗಾತ್ಮವೊಪ್ಪಿಸಿ
ಗೋರಿದ್ವಾರ ಹಾಯುತ್ತೇನೆ
ನಿನ್ನ ಗೋರಿ ನೆನಸಿ
ಈ ಶರೀರವನ್ನು ಕೀಟ
ತಿಂದರೇನು ಚಿಂತೆಯು?
ನಿತ್ಯ ಮಹಿಮೇ ಕಿರೀಟ
ಹೊಂದಿ ಹರ್ಷಗೊಂಬೆನು.

Go to top