Verse 1

ಯೇಸುಸ್ವಾಮಿ ಬಂದಿದ್ದೇವೆ
ಆಶೀರ್ವಾದ ಬೇಡುತ್ತಾ
ನಿನ್ನ ದಾಸರಾಗುತ್ತೇವೆ
ಜೀವವಿರ್ವ ತನಕ
ಆಳು ಬೇಕು ತೋಟದಲ್ಲಿ
ಎಂದು ನೀನು ಹೇಳಿದ್ದೀ
ನಮ್ಮಸ್ವೇಚ್ಛಾ ಸೇವೆಯಲ್ಲಿ
ನಿನಗಿಷ್ಟವಾಗಲಿ.

Verse 2

ನಿನ್ನ ಆದಿಶಿಷ್ಯರನ್ನು
ಹಚ್ಚಿದಾಗ ಸೇವೆಗೆ
ಕೊಟ್ಟು ಶ್ರೇಷ್ಠ ವರವನ್ನು
ಇದ್ದಿ ಅವರೊಂದಿಗೆ.
ಇಂದೂ ನಿನ್ನ ಕಾರ್ಯವನ್ನು
ಸಾಗಿಸೋದಕೆಮಗೆ
ಆಜ್ಞೆ ಕೊಟ್ಟಿ ಬಲವನ್ನು
ಕೊಡು ಆಜ್ಞೆಯೊಂದಿಗೆ.

Verse 3

ನಂಬಿಗಸ್ತ ಗುಣವನ್ನು
ಅಂತ್ಯವರೆಗೆಮ್ಮಲಿ
ಉಳಿಸೆಮ್ಮ ಹೃದವನ್ನು
ಸ್ಥಾಪಿಸಯ್ಯ ನಿನ್ನಲಿ       
ಶೋಧನಾದಿ ಕಾಲದಲ್ಲಿ
ಭದ್ರ ಮಾಡು ನಮ್ಮನು
ಕಾಲು ಜಾರಿ ಹೋಗುವಲ್ಲಿ
ದೃಢ ಪಡಿಸೆಮ್ಮನು.

Verse 4

ಉರಿಕೆಂಡ ಹೃದದಲ್ಲಿ
ಕೊಡು ಯಜ್ಞವೇದಿಯಿಂ
ಉರಿನುಡಿ ತುಟಿಯಲ್ಲಿ
ಇಟ್ಟು ನಿನ್ನ ಆತ್ಮದಿಂ
ವಾಕ್ಯವನ್ನು ಬಲವಾಗಿ
ಸಾರುವಂಥ ಸಾಮರ್ಥ್ಯ
ಜನ ನಡಿಸೋದಕಾಗಿ
ಜ್ಞಾನ ನೀಡು ಒಡೆಯ.

Verse 5

ಬೇಕು ದಣಿದವರನ್ನು
ಆದರಿಸೋ ಭಾಷೆಯು
ನಿನ್ನ ಅಂತರ್ಯೋಕ್ತಿಯನ್ನು
ಕೇಳುವಂಥ ಕಿವಿಯು
ಹೆಣದಲ್ಲಿ ಜೀವಬಲ
ನಿರ್ಮಿಸೋ ವಿಶ್ವಾಸವು
ಬಂಡೆಯಿಂದ ಜೀವಜಲ
ತರುವಂಥ ತ್ರಾಣವು.

Verse 6

ಆಶೆಯೆಲ್ಲ ಹೋಗುವಲ್ಲಿ
ಇನ್ನು ಆಶೆ ಪಡೋದು
ಹಾಸ್ಯ ಮಾಡೋ ಜನರಲ್ಲಿ
ಇನ್ನು ಪ್ರೀತಿ ಇಡೋದು
ಕಷ್ಟ ವ್ಯರ್ಥವಾಗುವಲ್ಲಿ
ಬೇಸರಿಲ್ಲದಿರೊದು
ಸಾಧ್ಯವಾಗುವಂತೆಮ್ಮಲ್ಲಿ
ಧೈರ್ಯ ಸ್ಥೈರ್ಯ ವರ್ಧಿಸು.

Verse 7

ಕುರಿಮಂದೆಗೊಳ್ಳೆ ಪೋಷ
ಇಕ್ಕುವಂಥ ಚಿಂತನೆ
ಅದಕ್ಕೇನೂ ಕಳೆ ದೋಷ
ಹತ್ತದಂತೆ ಜಾಗ್ರತೆ
ಭಯಭಕ್ತಿಯುಳ್ಳ ಹಾಡು
ಲೋಕಕೊಳ್ಳೆ ಮಾದರಿ
ನಮ್ಮಲ್ಲೆಲ್ಲ ಕಾಣಮಾಡು
ಲಾಲಿಸನುಗ್ರದಿ.

Verse 8

ಸ್ವಾಮಿ ವರಶ್ರೇಷ್ಠವನ್ನು
ಬೇಡುತಾರೆ ದಾಸರು
ಪವಿತ್ರಾತ್ಮ ದಾನವನ್ನು
ಕೊಡು ಪ್ರತಿಯೊಬ್ಬಗು
ಆಗ ಸೇವೆಯೇ ಸಾಫಲ್ಯ.
ಭಲಾ ಒಳ್ಳೇ ಆಳು ನೀ
ಸೇರು ಧನಿಯ ಕೈವಲ್ಯ
ಎಂದು ನಮಗ್ಹೇಳುವಿ.

Go to top