Verse 1

ಕ್ರಿಸ್ತ್ಯೇಸು ನಿನ್ನ ಮಾನಕ್ಕಾಗಿ
ನಾನೊಂದು ಪಾತ್ರೆ ಆಗಲಿ
ನೀ ಮೆಚ್ಚುವಂಥ ಸೇವೆಗಾಗಿ
ನನ್ನನ್ನು ನಿನ್ನ ರಕ್ತದಿ
ವಿಶುದ್ಧ  ಪಡಿಸೈ ಪವಿತ್ರ
ಈಯ್ ನಿನ್ನ ದಾನ ದಿವ್ಯ ಮಿತ್ರ.

Verse 2

ಭೂದ್ರವ್ಯ ಬೇಡ ಬೇಡ ಮಾನ
ಈ ಲೋಕಭಾಗ್ಯ ಬೇಡವು
ನೀ ನನ್ನನ್ನಿಡುವಂಥ ಸ್ಥಾನ
ಆ ಸ್ಥಾನದಲ್ಲಿ ನಿನ್ನನ್ನು
ಸನ್ಮಾನಿಸುವ ಶಕ್ತಿ ಯೇಸು
ಇಷ್ಟೆಂಗೆ ಸಾಕು ಇಷ್ಟೇ ಲೇಸು.

Verse 3

ಈ ಕಾಡಿನಲ್ಲಿ ಅಲೆದಾಡಿ
ನಿನ್ನನ್ನಪಾನವಿಲ್ಲದೆ
ಹೆಚ್ಚೆಚ್ಚು ಬಲಗುಂದಿ ಬಾಡಿ
ಹೋದಂಥ ಹೀನ ಪಾಪಿಗೆ
ಸಂಜೀವಕರ ನಿನ್ನ ದಯ
ಈ ಪಾತ್ರೆಯಲ್ಲಿ ಬಡಿಸಯ್ಯ.

Verse 4

ಈ ಸೇವೆಯಲ್ಲಿ ನನ್ನ ತ್ರಾಣ
ಸಂಪೂರ್ಣ ವೆಚ್ಚವಾಗಲು
ಕ್ರಿಸ್ತ್ಯೇಸು ನನ್ನ ಬಡ ಪ್ರಾಣ
ನೆನ್ನೆದೆಗಪ್ಪಿಕೊಂಡಿರು
ನಾನಿಲ್ಲಿ ನಿನ್ನ ಪ್ರತಿಕಾಂತಿ
ನೀನಲ್ಲಿ ನನ್ನ ನಿತ್ಯಶಾಂತಿ.

Go to top