Verse 1

ಆದಿಯಲ್ಲಿ ಒಡೆಯ
ನರನಿಂದ ನಾರಿಯ
ಉಂಟುಮಾಡಿ ಅವರ
ಸತಿಪತಿ ಮಾಡಿದ.

Verse 2

ಆದಿ ಲಗ್ನ ಹೋಲುತೆ
ಈಗಲಾದ ಮದುವೆ
ನೀನು ಆಶೀರ್ವದಿಸು
ತುದಿ ಮುಟ್ಟ ನಡಿಸು.

Verse 3

ವಧುವರರೊಳಗು
ಪ್ರೀತಿ ಭಕ್ತಿ ಬೆಳಿಸು
ಅವರನ್ನು ನಾಯಕಾ
ಕಾಯಿ ಸರ್ವ ಪಾಲಕಾ.

Verse 4

ನೀನು ಕೊಡೊ ದಾನವ
ಜೋಕೆಯಿಂದ ಬಳಸ
ಬುದ್ಧಿ ಕೊಟ್ಟು ಸಾಗಿಸು
ಸರ್ವ ಶುಭ ಸಿದ್ಧಿಸು.

Verse 5

ಶತ್ರುವಿನ ಬಾಣಕ್ಕೂ
ದುಷ್ಟ ಜನಯುಕ್ತಿಗೂ
ಇವರನ್ನು ತಪ್ಪಿಸು
ಖೇಡ್ಯವಾಗಿ ರಕ್ಷಿಸು.

Verse 6

ಕಷ್ಟಕಾಲ ಬರಲೆ
ಖಿನ್ನಭಿನ್ನರಾಗದೆ
ಬಾಲ ಭರವಸದಿ
ಮೊರೆ ನಿನಗಿಡಲಿ.

Verse 7

ಇಹವಾಸ ತೀರಿಸು
ಎಂತ ಆಜ್ಞೆಯಾಗಲು
ನಿನಗಾತ್ಮ ಒಪ್ಪಿಸ ಕೊಡು
ಬೋಧಬುದ್ಧಿಯ.

Verse 8

ತಂದೆ ಮಗ ಆತ್ಮನೇ
ಸದಾನಂದ ದೇವರೆ
ಆಲೈಸೆಮ್ಮ ಬೇಡಿಕೆ
ಹಾಕು ಸ್ವಸ್ತಿ ಮುದ್ರಿಕೆ.

Go to top