Verse

ಈ ಗಂಡ ಹೆಂಡಿರನ್ನು
ಕರ್ತಾ ನೀನಾಶೀರ್ವದಿಸು.
ನೀನವರೈಕ್ಯವನ್ನು
ಕಾಪಾಡಿ ಕೃಪೆಯಾಗಿರು.
ಈ ಹೊಸ ಮನೆಯಲ್ಲಿ
ಸುಕ್ಷೇಮವನ್ನು ತಾ.
ಈ ಹೃದಯಂಗಳಲ್ಲಿ
ನೀ ವಾಸ ಮಾಡ ಬಾ.
ಈ ನಿನ್ನ ಮಕ್ಕಳನ್ನು
ನಮ್ಮಪ್ಪಾ ಸಲಹು.
ಆ ಲೋಕಕವರನ್ನು
ಕಡೇಲಿ ಸೇರಿಸು.

Go to top