Verse 1

ಹಸಿದವನಾಗಿ ಬಂದೆ
ನಿನ್ನ ದಿವ್ಯ ಮೇಜಿಗೆ.
ನನ್ನ ಪಾಪ ಹೊರೆ ತಂದೆ
ನಿನ್ನ ಕ್ರೂಜೆಯಡಿಗೆ.
ಈ ರೋಟ್ಟಿಯಲುಂಟು ಸಂತೃಪ್ತಿಯ ದಾನ
ಶಿಲುಬೆಯಿಂ ಹುಟ್ಟಿತು ಆತ್ಮದ ಪಾನ.
ಸಂಜೀವದ ರಸವು ಹರಿಯುತೆ
ಶರೀರಕು ಆತ್ಮಕು ದೊರಕುತೆ.

Verse 2

ನಿನ್ನ ಮೇಲೆ ಪ್ರೀಯ ಯೇಸು
ನನ್ನ ಪೂರ್ಣ ಬಯಕೆ.
ದಿವ್ಯ ಮೇವನೀಗ ಮೆಯ್ಸು
ನಿನ್ನ ಬಡ ಕುರಿಗೆ.
ನೀನೆನ್ನನು ಊಟಕ್ಕೆ ಕುಂಡ್ರಿಸುವಾಗ
ನಿನ್ನಾಹಾರದಿಂದಲೆ ಪೋಷಿಸುವಾಗ.
ನಾ ಸಂಕಟವೆಲ್ಲವ ಮರೆಯುವೆ
ಸಂತೋಷ ಸಮುದ್ರದಿ ಮುಣುಗುವೆ.

Verse 3

ನನ್ನಲ್ಲೀಗ ಸುಳ್ಳು ಅರ್ಥ
ಕಪಟಾದಿ ದೋಷವು.
ಉಂಟೋ ಎಂದು ನೋಡು ಕರ್ತ
ನನ್ನ ಹೃದ ಶೋಧಿಸು.
ನಾ ವಂಚಕನಾಗಿ ಸಮಿಪಿಸಲಾರೆ
ನಾ ನಡೆದ ಮಾರ್ಗವು ಇದ್ದರೆ ವಾರೆ.
ಶ್ರೀ ಯೇಸುವೆ ಗುಣವ ಪಡಿಸ ಬಾ
ನಾ ನೆಟ್ಟಗೆ ಆಗುವ ತ್ರಾಣವ ತಾ.

Verse 4

ನನ್ನ ದೊಡ್ಡ ಭಾರವನ್ನು
ತೆಗೆದ್ಹಾಕು ಕ್ರಿಸ್ತನೇ.
ಪಾಪಪರಿಹಾರವನ್ನು
ದಯಪಾಲಿಸೀಶನೇ.
ನಾ ಮಾಡಿದ ದ್ರೋಹದ ಕಲ್ಮಷದಿಂದ
ಭಯಂಕರ ನರಕಬಾಧೆಯೊಳಿಂದ.
ವಿಮೋಚಿಸಿ ಶುಚಿಸಿ ಉದ್ಧರಿಸು
ನನ್ನಾತ್ಮದೊಳೆನ್ನ ನವೀಕರಿಸು.

Verse 5

ನಿನ್ನ ದಿವ್ಯ ಆಶೀರ್ವಾದ
ಸಮಾಧಾನ ಹರುಷ.
ನನಗಾಗಲಿ ಪ್ರಸಾದ
ಆಳಲೆನ್ನ ಹೃದಯ.
ಉದಾರದಿ ಕೃಪೆಯ ಬಾಹುಲ್ಯವನ್ನು
ನೀ ಸುರಿಸಿ ಚೈತನ್ಯ ಪಡಿಸೆನ್ನನ್ನು.
ದೇಹಾತ್ಮವ ನಿನ್ನಲಿ ಬದುಕಿಸು
ಅಲ್ಲಾಡದ ಬಂಡೆಯೊಳ್ ನೆಲೆಯಿಸು.

Verse 6

ನನ್ನ ಆತ್ಮ ಸ್ತೋತ್ರ ಮಾಡು
ದೇವಕುರಿಮರಿಗೆ.
ಹೊಸ ಗೀತವನ್ನು ಹಾಡು
ದಿವ್ಯ ರಕ್ಷಾಪ್ರೀತಿಗೆ.
ನಿರ್ಮೂಲಿಸಿ ಪಾಪದ ರಾಶಿಗಳನ್ನು
ಸಂಪ್ರಾಪ್ತಿಸಿ ಕೊಟ್ಟನಾರೊಗ್ಯತೆಯನ್ನು
ನನ್ನಿಂದ್ರಿಯವಾತಗೆ ಹರ್ಷಿಸುತೆ
ನನ್ನಾಂತರ್ಯವಾತಗೆ ಕೀರ್ತಿಸುತೆ.

Go to top