Verse 1

ನನ್ನ ಪ್ರಾಣ ಶೋಭೆಗೊಂಡು
ಪಾಪವನ್ನು ಹೇಸಿಕೊಂಡು.
ಬಾರೋ ಶುದ್ಧ ಬೆಳಕಾಗಿ
ಮೆರ್ಯ ಬೇಕು ಮೈಮೆಯಾಗಿ.
ಕಂಡ್ಯಾ ಕರ್ತನೊಲ್ಮೆಯಲ್ಲಿ
ಕರ್ಯುತಾನೆ ಊಟಕಲ್ಲಿ.
ವಿಶ್ವವಾಳುವಾತ ತಾನೆ
ನಿನ್ನಲಿರ ಬಂದಿದಾನೆ.

Verse 2

ಮಿತ್ರರಂತೆ ನೀ ಮುಂಕೊಳ್ಳು
ನಿನ್ನ ಕರ್ತಗೆದುರ್ಗೊಳ್ಳು.
ಆತ ತನ್ನ ಸರ್ವರಿಂಗೂ
ಕಾಣ್ಬನೊಲ್ಮೆಯಲ್ಲಿ ನಿಂಗೂ.
ತೆರೆ ನಿನ್ನ ಹೃದವನ್ನು
ಸದ್ವಿಶ್ವಾಸದಿಂದ ಅನ್ನು.
ಕರ್ತ ನನ್ನ ಆಶೆ ಬಲ್ಲಿ
ಶ್ರೇಷ್ಠ ಮಿತ್ರ ಬಾ ನನ್ನಲ್ಲಿ.

Verse 3

ನಿನ್ನ ಪ್ರೇಮದ್ಹೊರ್ತು ನನ್ನ
ಆತ್ಮಕೆಲ್ಲಿ ಸಿಕ್ಕೊದನ್ನ?
ರಾತ್ರಿ ಭೋಜನಾರ್ಥಿಯಾಗಿ
ಬಂದೆ ಹಸಿದವನಾಗಿ.
ಎಷ್ಟೊ ಕೋರಿತೆನ್ನ ಪ್ರಾಣ
ಜೀವ ರಾಜ ರಕ್ತಪಾನ.
ಭೋಜನ ತಕ್ಕೊಳ್ಳುವಲ್ಲಿ
ನನಗೈಕ್ಯ ಕ್ರಿಸ್ತನಲ್ಲಿ.

Verse 4

ಯೇಸು ನನ್ನ ಜೀವಕಾಂತಿ
ಯೇಸು ನನ್ನ ಹರ್ಷ ಶಾಂತಿ.
ಆದಿ ಅಂತ್ಯ ನೀನೆ ನಾಥ
ಜೀವಮೂಲ ತ್ರಾಣದಾತ.
ನನಗೊಳ್ಳೆ ಮೇಲಿಗಾಗಿ
ನಿನ್ನ ಸ್ವಂತ ಸ್ತೋತ್ರಕಾಗಿ.
ಸ್ವರ್ಗದನ್ನ ಬಡಿಸಯ್ಯ
ನಿನಗಡ್ಡ ಬಿದ್ದೆನಯ್ಯ.

Verse 5

ಕರ್ತ ದೊಡ್ಡ ಪ್ರೀತಿಯಿಂದ
ಬಂದಿ ಪರಲೋಕದಿಂದ.
ನನಗಾಗಿ ಪ್ರೀತಿಯಲ್ಲಿ
ಜೀವ ಕೊಟ್ಟಿ ಕ್ರೂಜೆಯಲ್ಲಿ.
ಚಿಲ್ಲಿ ನಿನ್ನ ರಕ್ತವನ್ನು
ನಿನ್ನ ಮೇಜಿನಿಂದದನ್ನು.
ಕೊಂಡು ಪ್ರೀತಿಭಕ್ತರೆಲ್ಲ
ಸ್ಮರಿಸ್ಯಾರು ಜೀವವೆಲ್ಲ.

Verse 6

ಯೇಸು ಸತ್ಯ ಜೀವರೊಟ್ಟಿ
ಪ್ರೇಮದೂಟ ನೀನೆ ಕೊಟ್ಟಿ.
ನಾನದನ್ನು ವ್ಯರ್ಥವಾಗಿ
ಉಣ್ಣ ಬಾರ್ದು ಕೇಡಿಗಾಗಿ.
ಊಟದಲ್ಲಿ ತೋರಿಸಿಂದು
ನಿನ್ನಗಾಧ ಪ್ರೇಮಸಿಂಧು.
ಸ್ವರ್ಗಪಂಕ್ತಿಯಲ್ಲೂ ದಯ
ಮಾಡಿ ನನ್ನ ಕುಂಡ್ರಿಸಯ್ಯ.

Go to top