Verse 1

ದೇವಾಹಾರವನ್ನು
ನಾವು ಭಕ್ಷಿಸೋಣ
ಬಾವಿಯಿಂದಕುಡಿಯೋಣ.
ಹಸಿದವರಿಂಗೆ
ಮಿಸಲೂಟ ತಾನೆ
ಯೇಸು ನೀಡ ಬಂದಿದ್ದಾನೆ.
ಆತನು
ದಾತನು
ಅತಿಥೇಯ ತಾನೆ
ತಾತನಂತಿದ್ದಾನೆ.

Verse 2

ರಾಜ ಮೃತಪಟ್ಟ
ಪ್ರಜಾ ರಕ್ಷೆಗಾಗಿ
ಕ್ರೂಜೆಯಲ್ಲಿ ಯಜ್ಞವಾಗಿ.
ಪರಿಶುದ್ಧ ಜಲ
ವರತೀರ್ಥದಿಂದ
ಹರಿಯುತ್ತದಂದಿನಿಂದ.
ಅನ್ನವ
ಮನ್ನವ
ತಿನ್ನ ಕರ್ಯುತಾನೆ
ತನ್ನ ನೀಡುತ್ತಾನೆ.

Verse 3

ನಾನು ತಿನ್ನ ಬಂದೆ
ಏನೂ ತರಲಿಲ್ಲ
ನೀನು ಖಾಲಿ ಬಿಡೊದಿಲ್ಲ.
ದೆಸೆಗೆಟ್ಟ ನಾನು
ಹಸಿದಿರುತ್ತೇನೆ
ಗಾಸಿಯಾಗಿ ಸಾಯುತ್ತೇನೆ.
ತುಷ್ಟಿಯ ರೊಟ್ಟಿಯ
ಕೊಟ್ಟು ಸಾಕು ನನ್ನ
ಇಟ್ಟು ಕೃಪೆಯನ್ನ.

Verse 4

ನನಗಾಗಿ ಆತ
ತನ್ನ ರಕ್ತ ಕೊಟ್ಟ
ಮನ ಶುದ್ಧ ಮಾಡಿ ಬಿಟ್ಟ.
ದುರವಸ್ಧೆಯೆಲ್ಲ
ವರ ಕೊಟ್ಟು ಶಾನೆ
ಪರಿಹಾರ ಮಾಡಿದ್ದಾನೆ.
ಸ್ತೋತ್ರಕ್ಕೆ
ಮಾತ್ರವೆ
ಪಾತ್ರನಾತನನ್ನಿ
ಸ್ತೋತ್ರವನ್ನು ತನ್ನಿ.

Verse 5

ಇನ್ನು ಮುಂದೆ ಕರ್ತ
ನಿನ್ನ ಸೇವೆಯಲ್ಲಿ
ನನ್ನನಿಡು ನಿತ್ಯದಲ್ಲಿ.
ಅತ್ಯಮೂಲ್ಯ ನೀನು
ನಿತ್ಯವಾಗಿ ಇರು
ಸತ್ಯವಾದ ನನ್ನ ಗುರು.
ಬಿಡದೆ
ಹಿಡಿವೆ
ಇಡಿ ನಿನ್ನ ಮಾರ್ಗ
ಕಡೆಗೀಯು ಸ್ವರ್ಗ.

Go to top