Verse 1

ದೇವಪುತ್ರ ಯೇಸುವೇ
ನಿನ್ನ ರಕ್ತ ಜೀವವೇ
ರಕ್ಷಿಸೆಮ್ಮ ಕರ್ತ.

Verse 2

ದಿವ್ಯ ಯಜ್ಞಮೂರ್ತಿಯೇ
ಜೀವರೊಟ್ಟಿ ನಮಗೆ
ನೀನೆ ಆಗು ಕರ್ತ.

Verse 3

ನೀ ಪ್ರಧಾನ ಯಾಜಕ
ದಿವ್ಯ ಶಾಂತಿದಾಯಕ
ಪಾಲಿಸೆಮ್ಮ ಕರ್ತ.

Verse 4

ತೀರಿತೆಂದು ಕೂಗಿದ
ಸ್ವಾಮಿ ನಮ್ಮ ಪಾಪವ
ನೀಗಿಸಿಂದು ಕರ್ತ.

Verse 5

ನಿನ್ನ ಕ್ರೂಜೆ ನೆನಸಿ
ನಿನ್ನ ನಾಮ ಸ್ತುತಿಸಿ
ಹಾಡುತ್ತೇವೆ ಕರ್ತ.

Verse 6

ತಕ್ಕೊ ಈಗ ನಮ್ಮನು
ನಮ್ಮ ಜೀವ ನಿನ್ನದು
ನಿತ್ಯ ಬಾಳು ಕರ್ತ.

Go to top