Verse 1

ನಿನ್ನ ಹತ್ರ ನಿಲ್ಲುತೇನೆ
ಎಂದೂ ಬಿಟ್ಟು ಬಿಡದೆ.
ನಿನ್ನ ದಾಸನಾಗಿದ್ಧೇನೆ
ಅತಿ ಪ್ರೀಯ ಯೇಸುವೇ.
ನೀನು ನನ್ನ ಪ್ರಾಣತತ್ವ
ನನ್ನ ಜೀವಬಲವೆ
ಗಿಡ ಕೊಂಬೆಗೆಲ್ಲ ಸತ್ವ
ಕೊಡುತಿರ್ವ ಹಾಗೆಯೆ.

Verse 2

ನಿನ್ನ ಹಾಗೆ ಮಿತ್ರನೆಲ್ಲಿ
ಪ್ರೇಮಸಿಂಧು ದೇವರೆ?
ಸ್ವಂತ ಜೀವರಕ್ತ ಚೆಲ್ಲಿ
ಕ್ಷೇಮ ಕೊಟ್ಟಿ ನನಗೆ.
ನೀನು ಭದ್ರದುರ್ಗಸ್ಥಲ
ಧೈರ್ಯಭ್ರಷ್ಟ ಪಾಪಿಗೆ
ಸರ್ವಲೋಕರಾಜ್ಯ ಬಲ
ಅಧಿಕಾರ ನಿನ್ನದೆ.

Verse 3

ನಿನ್ನ ಹತ್ರ ನಿಲ್ಲುತೇನೆ
ಸುಖದುಃಖಕಾಲದಿ
ನಿನ್ನ ದಾಸನಾಗಿದ್ದೇನೆ
ಇಹಪರಲೋಕದಿ.
ಇಹದಲ್ಲಿ ಭಕ್ತರನ್ನು
ಕೃಪೆಯಿಂದ ಕಾಯುತ್ತಿ
ಅಂತ್ಯದಲ್ಲಿ ಕ್ಷೇಮವನ್ನು
ಸ್ವರ್ಗದಲ್ಲಿ ಕೊಡುವಿ.

Verse 4

ಯೇಸು ಜೀವದಂತ್ಯದಲ್ಲಿ
ನಿಲ್ಲು ನನ್ನ ಹತ್ರವೆ.
ಘೊರ ಮೃತ್ಯು ರಾತ್ರಿಯಲ್ಲಿ
ಸೂರ್ಯನಾಗು ನನಗೆ.
ಸಾಯುವಂಥ ಕಷ್ಟದಲ್ಲಿ
ಕಣ್ಣು ಮೊಬ್ಬಾದಾಗಲೇ
ನಿತ್ಯಜೀವ ಪ್ರಭೆಯಲ್ಲಿ
ಸೇರಿಸೆನ್ನ ಯೇಸುವೇ.

Go to top