Verse 1

ತ್ರಾಹಿ ಮಧ್ಯವರ್ತಿಯೇ
ನಿನ್ನ ಭಕ್ತರನ್ನು
ಕಾಯಿ ಸರ್ವನಾಥನೇ
ನಿನ್ನ ಸಭೆಯನ್ನು.
ನಿನ್ನನ್ನು ನಂಬುತೇವೆ
ನೀನೆಮ್ಮ ಯಜಮಾನನು
ನಾವು ನಿನ್ನ ದಾಸರು
ದಿವ್ಯ ನಿರ್ಮಾಣಿಕ
ದಿವ್ಯ ಮಧ್ಯಸ್ಥನೇ
ಬೋಧಕನೇ ಸಂರ್ಧೈಯದಾತ
ಉದ್ಧಾರಕನೇ
ಜೀವದನ್ನಪಾನ
ದಯೆಪಾಲಿಸೆಮಗೆ
ಕಟಾಕ್ಷವಿಟ್ಟು.

Verse 2

ನಮ್ಮ ಪ್ರಾಯಶ್ಚಿತ್ತಕೆ
ನಿನ್ನ ಪ್ರಾಣ ಬಿಟ್ಟು
ನಿನ್ನ ರಕ್ತ ಚೆಲ್ಲಿದೆ
ಪ್ರೀತಿ ನಮ್ಮಲ್ಲಿಟ್ಟು.
ನೀನೆಮ್ಮ ಶಿಕ್ಷೆ ಹೊತ್ತಿ
ನಮ್ಮನ್ನು ಕನಿಕರಿಸಿ
ಕ್ರೂಜೆಯಲ್ಲಿ ತೀರಿದಿ
ದಿವ್ಯ ನಿರ್ಮಾಣಿಕ
ದಿವ್ಯ ಮಧ್ಯಸ್ಥನೇ
ಬೋಧಕನೇ ಸಂಧೈರ್ಯದಾತ
ಉದ್ಧಾರಕನೇ
ಪಾಪಪರಿಹಾರ
ದಯೆಪಾಲಿಸೆಮಗೆ
ಕಟಾಕ್ಷವಿಟ್ಟು.

Verse 3

ನಿತ್ಯ ಜೀವರಾಜನೆ
ಎದ್ದು ಗೋರಿಯಿಂದ
ಮೃತಿಯನ್ನು ಜೈಸಿದೆ
ದಿವ್ಯ ತ್ರಾಣದಿಂದ.
ನಿನ್ನಲ್ಲಿ ನಮ್ಮ ಜೀವ
ಪಾತಾಳಲೋಕಕಿಳಿದಿ
ದಿವಕೇರಿ ಬಾಳುತಿ
ದಿವ್ಯ ನಿರ್ಮಾಣಿಕ
ದಿವ್ಯ ಮಧ್ಯಸ್ಥನೇ
ಬೋಧಕನೇ ಸಂಧೈರ್ಯದಾತ
ಉದ್ಧಾರಕನೇ
ನಮ್ಮ ಆತ್ಮವನ್ನು
ಮೃತಿಯಿಂದ ತಪ್ಪಿಸು
ಕಟಾಕ್ಷವಿಟ್ಟು.

Go to top