Verse 1

ಸಭೆ-
ಬನ್ನಿ ಬನ್ನಿ ಮಕ್ಕಳೇ
ನಿಮ್ಮ ಸ್ನಾನ ದೃಢವೇ
ಯೇಸು ಕ್ರಿಸ್ತ ನಿಮ್ಮನು
ಕೊಂಡನು.
 
ಮಕ್ಕಳು-
ಶುಭವಾರ್ತೆ ಕೇಳಿದ್ಧೇವೆ
ಕ್ರಿಸ್ತದಾಸರಾಗುತೇವೆ.
ಆತ ನಮ್ಮ ಸ್ವಾಮಿಯು
ಬೇಡ ಬೇರೆ ಪ್ರೇಮಿಯು.

Verse 2

ಸಭೆ-
ನೀವು ದ್ರಾಕ್ಷೆಬಳ್ಳಿಯ
ಅಂಟಿಕೊಳ್ಳಿ ಸರ್ವದಾ
ವಾಕ್ಯದಿ ಪ್ರಸಾದದಿ
ಹೀರಿರಿ.
 
ಮಕ್ಕಳು-
ಯೇಸು ಪ್ರೀತಿಗಂತ್ಯವಿಲ್ಲ
ಯೇಸುವನ್ನು ಬಿಡೊದಿಲ್ಲ
ಕೃಪೆ ಪಾನ ಮಾಡುತ
ಆತಗಾಗಿ ಗೇಯುವ.

Verse 3

ಸಭೆಯೂ ಮಕ್ಕಳು ಕೂಡ-
ಆದಿ ಶಿಷ್ಯಭಕ್ತಿಯು
ನಮ್ಮ ಮೇಲುಪಂಕ್ತಿಯು
ಯೇಸುವೇ ಕಟಾಕ್ಷಿಸು ನಮ್ಮನ್ನು.
ಈಗ ಬಲಹೀನರಾದ
ನಮಗೀಯು ಆಶೀರ್ವಾದ
ನಿನ್ನೆ ಇಂದು ನಿತ್ಯವು
ನೀನೆ ನಮ್ಮ ದೇವರು.

Go to top