Verse 1

ಪಿತಾಪುತ್ರಾತ್ಮ ನಾಮಸ್ನಾನ
ಹೊಂದಿರುವಂಥ ನಮಗೆ
ನೀ ತಂದೆ ಕೊಟ್ಟಿ ಪುತ್ರಸ್ಥಾನ
ನಮ್ಮನು ನೀನು ಯೇಸುವೆ
ಸ್ವರಕ್ತದಿಂದ ತೊಳೆದಿ
ದೇವಾತ್ಮಾ ಅದರಿಸುತ್ತಿ.

Verse 2

ನಾವೋ ಸೈತಾನವಶದಿಂದ
ವಿಮುಕ್ತರಾಗಿ ನಿನ್ನಲ್ಲೇ
ಸಂಪೂರ್ಣ ಭಯಭಕ್ತಿಯಿಂದ
ವಿಶ್ವಾಸವಿಟ್ಟು ಕರ್ತನೇ
ನಿನ್ನನ್ನು ಪ್ರೀತಿಸುವೆವು
ಎಂದ್ಹೇಳಿ ಮಾತು ಕೊಟ್ಟೆವು.

Verse 3

ನೀ ಕರ್ತಾ ಸತ್ಯಸಂಧನಾಗಿ
ವಾಗ್ದಾನಮಂ ಕಾಪಾಡುವಿ
ನಾವೋ ವಿಶ್ವಾಸಭ್ರಷ್ಟರಾಗಿ
ಕೆಟ್ಟೇವು ನೀನು ತಿರುಗಿ
ಐತಪ್ಪ ಪಾಪೀ ಮಿತ್ರನು.
ಅಃ ನಮ್ಮನ್ನು ಕಟಾಕ್ಷಿಸು.

Verse 4

ನಾವಿಂದು ನಿಂಗೆ ಹೊಸತಾಗಿ
ಸರ್ವಸ್ವವೀಯ ಬಂದೆವು
ಪ್ರತಿಷ್ಠಿ ಸಾರ್ಯಸೇವೆಗಾಗಿ
ನಮ್ಮಾತ್ಮ ಪ್ರಾಣ ಮನಸ್ಸು
ಆರಾಧ್ಯನು ನೀನೊಬ್ಬನೇ
ನಾವಿನ್ನು ನಿನ್ನ ದಾಸರೇ.

Verse 5

ನೀ ಮೆಚ್ಚಿ ಈ ಪ್ರತಿಜ್ಞೆಯನ್ನು
ಪಿತಾಪುತ್ರಾತ್ಮ ದೇವರೇ
ಪೂರೈಸೋ ಬುದ್ಧಿ ಬಲವನ್ನು
ಕೊಟ್ಟೆಮ್ಮ ಪಾಲಿಸಾಳ್ಮನೇ
ನಿನ್ನವರಾಗಿ ನಡೆದು
ನಿಂಗಾಗಿ ಸತ್ತು ಬಾಳ್ವೆವು.

Go to top