Verse 1 ಸಭೆ

ಅಪ್ಪಾ ನೀ ನಮಗೊಲಿದು
ಈ ಮಕ್ಕಳಂ ಕಟಾಕ್ಷಿಸು
ನೀನವರನ್ನು ಸ್ನಾನದಿಂದ
ಸ್ವೀಕರಿಸಿದ್ದೀ ಕೃಪೆಯಿಂದ
ಕಟಾಕ್ಷಿಸು ಕಟಾಕ್ಷಿಸು.

Verse 2 ಮಕ್ಕಳು

ಅಂದಾದ ಒಡಂಬಡಿಕೆ
ಈ ಜೀವವಿರೋ ವರೆಗೆ
ಕೈಕೊಳ್ಳ ಮನಸ್ಸಾಗಿದ್ಧೇವೆ
ಸದಾ ನಿನ್ನವರಿರುತ್ತೇವೆ
ಸ್ವೀಕರಿಸು ಸ್ವೀಕರಿಸು.

Verse 3 ಸಭೆ

ನಿನ್ನಾತ್ಮವರ ಸುರಿದು
ನಿನ್ನಾಶೀರ್ವಾದ ಪಾಲಿಸು
ಈ ಮಕ್ಕಳಿಂಗೆ ಪ್ರಿಯ ತಂದೆ
ಸಂರಕ್ಷಿಸಿನ್ನು ನಿನ್ನ ಮಂದೆ
ಸಂರಕ್ಷಿಸು ಸಂರಕ್ಷಿಸು.

Verse 4 ಮಕ್ಕಳು

ಈ ತಂತ್ರವುಳ್ಳ ಲೋಕದಿ
ನೀನೆಮ್ಮ ಬಲ ಪಡಿಸು
ದುರ್ಮೋಹ ಮದ ಮದ್ಯದಿಂದ
ಸೈತಾನನಿಟ್ಟ ಬಲೆಯಿಂದ
ವಿಮೋಚಿಸು ವಿಮೋಚಿಸು.

Verse 5 ಸಭೆಯೂ ಮಕ್ಕಳೂ ಒಟ್ಟಿಗೆ

ಕೈ ಹಿಡಿ ನಮ್ಮ ತಂದಯೆ
ಆ ಮೇಲಿನ ಸ್ವದೇಶಕೆ
ನಮ್ಮೆಲ್ಲರನ್ನು ಪಾರು ಮಾಡು
ನಿನ್ನಾತ್ಮದೈಕ್ಯದಿ ಕಾಪಾಡು
ಕೇಳೆಮ್ಮನ್ನು ಕೇಳೆಮ್ಮನ್ನು.

Go to top