Verse 1

ಸರ್ವಾಧಿಕರ ನನ್ನದೇ
ಭೂಪರಲೋಕದಲ್ಲಿ
ಸುವಾರ್ತೆ ಸಾರಿ ಶಿಷ್ಯರೇ
ಸಮಸ್ತ ಸೃಷ್ಟಿಯಲ್ಲಿ
ಪಿತಾಪುತ್ರಾತ್ಮನಾಮದಿ
ಕೊಟ್ಟಿನ್ನು ಸ್ನಾನವನ್ನು
ಕೈಕೊಳ್ಳಲಿಕ್ಕೆ ಹೇಳಿರಿ
ನಾ ನಿಮಗ್ಹೇಳಿದ್ದನ್ನು
ಎಂಬಾಜ್ಞೆ ಯೇಸು ಕೊಟ್ಟ.

Verse 2

ಈ ಆಜ್ಞೆಗನುಸಾರವು
ಈಗಹುದಿಲ್ಲಿ ಸ್ನಾನ
ಶ್ರೀ ಯೇಸು ದಯೆಪಾಲಿಸು
ಪವಿತ್ರ ಆತ್ಮದಾನ
ಈ ಅಂಗವನ್ನು ಸೇರಿಸಿ
ನಿನ್ ಸಭಾಕಾಯದಲ್ಲಿ
ಈ ಕುಡಿಯನ್ನು ನಿನ್ನಲಿ
ಅಂಟಿಕ್ಕು ನಿಜ ಬಳ್ಳಿ
ಈ ಕುರಿಯನ್ನು ಕಾಯಿ.

Go to top