Verse 1

ದಿವ್ಯ ಶಾಸನ ಭವ್ಯ ಭಾಷಣ
ಮೇಲುಲೋಕ ಜೀವಸಾರವ
ಹಾಲು ಜೇನಿನಂಥ ಪ್ರೀತಿಯ
ಕೀಳು ಲೋಕಕೀಯುತ್ತಿರುವ
ದ್ರವ್ಯನಿಧಿಯೇ
ದಿವ್ಯ ಗ್ರಂಥವೇ
ಮೇಲುಲೋಕ ಜೀವಸಾರವ
ಹಾಲು ಜೇನಿನಂಥ ಪ್ರೀತಿಯ
ಕೀಳು ಲೋಕಕೀಯುತ್ತಿರುವ
ನೀ ಸತ್ಯವು
ನೀ ನನ್ನದು
ಶ್ರೀ ಬೈಬಲು.

Verse 2

ಇನ್ನು ಬದ್ಧವು ನಿನ್ನ ನ್ಯಾಯವು
ನರರೆಲ್ಲ ತಪ್ಪಿ ಹೋದರು
ನರಜ್ಞಾನ ಮೂರ್ಖತನವು
ನರಜಾತಿ ಶಾಪಮಯವು
ಭ್ರಷ್ಟತನವು
ಅಷ್ಟು ಘೋರವು
ನರರೆಲ್ಲ ತಪ್ಪಿ ಹೋದರು
ನರಜ್ಞಾನ ಮೂರ್ಖತನವು
ನರಜಾತಿ ಶಾಪಮಯವು
ನೀ ಸತ್ಯವು
ನೀ ನನ್ನದು
ಶ್ರೀ ಬೈಬಲು.

Verse 3

ಶುಭವಾರ್ತೆಯು ಸಭೆ ಲಾಲಿಸು
ಸ್ತುತ್ಯನೊಬ್ಬ ಪುರುಷೋತ್ತಮ
ಸತ್ಯನೊಬ್ಬನವತಾರಕ
ನಿತ್ಯನೊಬ್ಬ ನರರಕ್ಷಕ
ಅಂದು ಬಂದನು
ಇಂದಿರುವನು
ಸ್ತುತ್ಯನೊಬ್ಬ ಪುರುಷೋತ್ತಮ
ಸತ್ಯನೊಬ್ಬ ನವತಾರಕ
ನಿತ್ಯನೊಬ್ಬ ನರರಕ್ಷಕ
ನೀ ಸತ್ಯವು
ನೀ ನನ್ನದು
ಶ್ರೀ ಬೈಬಲು.

Verse 4

ಬಡ ಪಾಪಿಗೆ ಜಡ ರೋಗಿಗೆ
ನವ ಜೀವಕರ ಔಷದಿ
ನವ ದೇಹಾ ಕಾಶ ಪೃಥಿವಿ
ಈವನೀಶನೆಂದು ಹೇಳುತಿ
ನಿತ್ಯ ಕ್ಷೇಮವು
ನಿತ್ಯ ತೃಪ್ತಿಯು
ನವ ಜೀವಕರ ಔಷದಿ
ನವ ದೇಹಾಕಾಶ ಪೃಥಿವಿ
ಈವನೀಶನೆಂದು ಹೇಳುತಿ
ನೀ ಸತ್ಯವು
ನೀ ನನ್ನದು
ಶ್ರೀ ಬೈಬಲು.

Go to top