Verse 1

ದೇವವಾಕ್ಯ ನಿನಗೆ
ಕೊಡೊದೆಂತು ಯೋಗ್ಯ ಘನ?
ನಿನ್ನ ಹಾಲು ಕುಡಿದೆ
ಉಣ್ಣಿಸಿದ್ದಿ ನಿನ್ನ ಮನ್ನ
ಕ್ಷೇಮಕರ ಔಷಧಿ
ನನ್ನ ಆತ್ಮಕೀಯುತಿ.

Verse 2

ನೀನು ಶತ್ರು ಬಾಣವ
ಹಿಂದಕ್ಹಾಕುವಂಥ ಡಾಲು
ನೀನು ದಿವ್ಯ ಖಡುಗ
ನನ್ನ ಕೈಗೆ ಶ್ರೇಷ್ಠ ಪಾಲು
ನೀನು ಉಕ್ಕಿಗಿಂತಲೂ
ಯುದ್ಧದಲ್ಲಿ ಹದವು.

Verse 3

ತುಂಬಿವೆ ಸಮುದ್ರವೇ
ಮುತ್ತು ನಿನ್ನ ಒಡಲಲ್ಲಿ
ಎಷ್ಟೋ ಹೊನ್ನು ಶೈಲವೇ
ಉಂಟು ನಿನ್ನ ಗರ್ಭದಲ್ಲಿ
ಹೊಲ ನಿನ್ನ ಬೆಳೆಯು
ಹೊಟ್ಟುಸೂಡು ಇಲ್ಲದ್ದು.

Verse 4

ರಮ್ಯವಾದ ವನವೆ
ಶ್ರೇಷ್ಠ ಹೂವು ಮಿಂಚೊ ತೋಟ
ನಿನ್ನಲುಂಟು ನನಗೆ
ಒಳ್ಳೇ ಶ್ರುತಿ ಒಳ್ಳೇ ನೋಟ
ಭಾರ ಹೊರೆಯಿಲ್ಲಿಗೆ
ಹಾಕಿ ಸುಖಿಯಗುವೆ.

Verse 5

ಬೆಳಕುಳ್ಳಾಕಾಶವೇ
ನಿನ್ನ ನಕ್ಷತ್ರಂಗಳಿಂದ
ಇಹರಾತ್ರಿಯೊಳಗೆ
ಕಾಂತಿಯಾಗುವದರಿಂದ
ಲೋಕಕಾಡಿನೊಳಗೆ
ದಾರಿ ಸಿಕ್ಕೊದೆನಗೆ.

Verse 6

ಪ್ರೀಯ ದೇವವಾಕ್ಯವೆ
ಕಷ್ಟದಲ್ಲಿ ನೀನೆ ಶಾಂತಿ
ಲೋಕದಲ್ಲಿ ಕತ್ತಲೆ
ಹೆಚ್ಚುವಾಗ ನೀನೆ ಕಾಂತಿ
ಅಂತ್ಯಶ್ವಾಸ ಹೋಗಲು
ನೀನೆ ನನ್ನ ಧ್ಯಾನವು.

Go to top