Verse 1

ಶುದ್ಧ ದಿವ್ಯ ಗ್ರಂಥವೇ
ನನ್ನ ಶ್ರೇಷ್ಠ ದ್ರವ್ಯವೇ
ತೋರಿಸೆನ್ನ ಸ್ಥಿತಿಯ
ಬೊಧಿಸೆಂಗೆ ಮಿತಿಯ
ಶುದ್ಧ ದಿವ್ಯ ಗ್ರಂಥವೆ
ಶ್ರೇಷ್ಠ ದ್ರವ್ಯವೆನಗೆ.

Verse 2

ನೀನೇ ನಡಿಸೆನ್ನನ
ತೋರಿಸೆನ್ನ ಪಾಪವ
ನೀನೇ ನನ್ನ ರಕ್ಷಣೆ
ನನ್ನ ಜೀವಮಾರ್ಗವೆ
ಶುದ್ಧ ದಿವ್ಯ ಗ್ರಂಥವೆ
ಶ್ರೇಷ್ಠ ದ್ರವ್ಯವೆನಗೆ.

Verse 3

ಮೊಕ್ಷ ಲೋಕದಾನಂದ
ಮಾಡೆನ್ನಲ್ಲಿ ಖಚಿತ
ಮರಣಾಂಧಕಾರದಿ
ನಂಬಲಿಕ್ಕೆ ಧೈರ್ಯದಿ
ಶುದ್ಧ ದಿವ್ಯ ಗ್ರಂಥವೆ
ನೀನೆ ಬೋಧಿಸೆನಗೆ.

Verse 4

ನಾನು ಸತ್ತು ಏಳಲು
ಮಹಿಮಾ ಕಿರೀಟವು
ದೇವರಿಂದ ಹೊಂದುವ
ಮಾರ್ಗ ಬುದ್ಧಿ ಶಕ್ತಿಯ
ನೀನು ಬೋಧಿಸೆನಗೆ
ಶುದ್ಧ ದಿವ್ಯ ಗ್ರಂಥವೆ.

Go to top