Verse 1

ಏಳೇಳು ಕ್ರೈಸ್ತಶೂರ
ರಜಾಜ್ಞೆ ವಹಿಸು
ಸಮಿಪಾ ಮತ್ತು ದೂರ
ಕಂಗಾಲ ಜನರು.
ಆ ಮಕೆದೋನ್ಯನಂತೆ
ಇದ್ದಾರೆ ಕೂಗುತಾ
ಸದ್ಗತಿಯಾಗುವಂತೆ
ಸಹಾಯ ಮಾಡ ಬಾ.

Verse 2

ದಯಾಳು ವಿಶ್ವಪಿತ
ಒಂದೊಂದು ನಾಡಿಗೆ
ತನ್ನಾಶೀರ್ವಾದವಿತ್ತ
ನಾನಾ ಪ್ರಕಾರವೆ.
ಉದ್ಭಿಜ್ಜ ಪ್ರಾಣಿಕೋಟಿ
ಇತ್ಯಾದಿ ಒಳ್ಳೇವು
ಮನುಷ್ಯ ಮಾತ್ರ ಖೋಡಿ
ನಿಷ್ಫಲವೃಕ್ಷವು.

Verse 3

ಜಾಪಾನ ಚೀನ ಜಾತಿ
ಎಸ್ಕೀಮೊ ಮಾವೊರಿ
ಆ ನರಭಕ್ಷಕಾದಿ
ದೀಪಾಂತ್ರ ಸಂತತಿ
ಸಮಸ್ತರಲೆದಾಡಿ
ಸನ್ಮಾರ್ಗ ತೊರೆದು
ಕುಮೂರ್ತಿಯಂ ಕೊಂಡಾಡಿ
ಗೋಳಾಡಿ ಸಾಯ್ವರು.

Verse 4

ನಾವಿನ್ನು ಸುಸ್ತಿಯಿಂದ
ಹಿಂದಿರಬಾರದು.
ಕ್ರಿಸ್ತ್ಯೇಸು ಕೃಪೆಯಿಂದ
ವಿಮುಕ್ತಿ ಕಂಡೆವು.
ಏಳೇಳು ಕ್ರೈಸ್ತ ಏಳು
ರಾಜಾಜ್ಞೆ ವಹಿಸು
ಸುವಾರ್ತೆ ಸಾರಿ ಹೇಳು
ಸಮಸ್ತ ಸೃಷ್ಟಿಗು.

Go to top