Verse 1

ತುತೂರಿ ಊದಿರಿ
ಗಟ್ಟ್ಯಾದ ಶಬ್ದದಿ
ಸುವಾರ್ತೆ ಸಾರಿರಿ
ಮಹಾ ಸಂತೋಷದಿ
ಚೀಯೋನಿನಲ್ಲಿ ಆಳುತಾನೆ.
ಯೆಹೋವ ವಿಶ್ವಪಾಲ ತಾನೆ
ಚೀಯೋನೇ ಹತ್ತಿ ಗೋಪುರ
ಪ್ರಸಂಗಿಸು ಸುವಾರ್ತೆಯ.

Verse 2

ವಿಜಯ ಕೀರ್ತಿಯು
ರಾಜಾಧಿರಾಜಗೆ
ನಿರ್ಭೀತಿ ಧೈರ್ಯವು
ಸ್ವಕೀಯ ಪ್ರಜೆಗೆ.
ತ್ರಿಲೋಕಪಾಲಕಾಧಿಕಾರ
ಯಾರೊಬ್ಬ ಮುರಿದ್ಹಾಕಲಾರ
ಈ ರಾಜಸೇವೆ ಮಾಡೋದು
ಕ್ರೈಸ್ತರ್ಗೆ ಶ್ರೇಷ್ಠ ಬಿರುದು.

Verse 3

ಭೂಲೋಕದಲ್ಲೆಲ್ಲು
ಸುವಾರ್ತೆ ಹಬ್ಬಲಿ
ಕ್ರಿಸ್ತ್ಯೇಸು ಶಿಷ್ಯರು
ಬಾಯ್ದೆರೆದ್ಹೇಳಲಿ.
ಉದಯದಿಂದಾರಂಭವಾಗಿ
ಸಂಧ್ಯಾ ಪರ್ಯಂತ ಗಟ್ಟಿಯಾಗಿ
ಸುವಾರ್ತಾಘೋಷ ಕೇಳಲಿ
ಕೊಂಡಾಡೋ ಶಬ್ದ ಏಳಲಿ.

Verse 4

ವಿಧೇಯ ಸೈನ್ಯವು
ಬೇಕೆಮ್ಮ ರಾಜಗೆ
ಎಲ್ಲುಂಟು ಧೈರ್ಯವು?
ಈ ದೊಡ್ಡ ಕಾರ್ಯಕೆ?
ನಾವೆಲ್ಲರಾತಗೇ ಪ್ರಮಾಣ
ಮಡೋಣ ನಮ್ಮ ಎಲ್ಲ ತ್ರಾಣ
ಮನೋವಾಕ್ಯಯವೆಲ್ಲವ
ಈ ಸೇವೆಗೊಪ್ಪಿಸೀಯುವ.

Verse 5

ನಿನ್ನಾರ್ಯ ಸೇವೆಗೆ
ಆಯೋಗ್ಯರಾದೆವು
ಕೃಪಾಳು ಕರ್ತನೆ
ಕಟಾಕ್ಷಿಸೆಮ್ಮನ್ನು.
ಈ ನಿನ್ನ ಶ್ರೇಷ್ಠ ಕಾರ್ಯಕ್ಕಾಗಿ
ಬೇಕಾದ ವರ ರಾಶಿಯಾಗಿ
ನೀನೆಮ್ಮ ಮೇಲೆ ಸುರಿಸು
ನಿನ್ನಾತ್ಮ ದಯಪಾಲಿಸು.

Go to top