Verse 1

ಸರ್ವರನ್ನು ಕರಕೊಳ್ಳಿ
ತಪ್ಪಿ ಹೋದ ಪಾಪಿಗೆ
ಪೂರ್ಣ ಪಾಪಪರಿಹಾರ
ಕ್ರಿಸ್ತನಿಂದ ಸಿಕ್ಕುತ್ತೆ.
ಕಾಮ ಕ್ರೋಧ ಲೋಭ ಮೋಹ
ಮತ್ಸರಾದಿ ಪಾಶದಿ
ಬದ್ಧರಾದ ಜನರನ್ನು
ಕರಕೊಂಡು ಬನ್ನಿರಿ.

Verse 2

ಸರ್ವರನ್ನು ಕರಕೊಳ್ಳಿ
ಕುಲ ವರ್ಣ ನೋಡದೆ
ಬಾ ಗರಿಬ ಬಾ ಕುಬೇರ
ಎಂಬ ಕೂಗು ಸರಿಯೆ.
ಫರಿಸಾಯ ಸುಂಕದವ
ಸರ್ವ ವಿಧ ಪಾತಕಿ
ಎಲ್ಲರನ್ನು ಕ್ರಮವಾಗಿ
ಕರಕೊಂಡು ಬನ್ನಿರಿ.

Verse 3

ಸರ್ವರನ್ನು ಕರಕೊಳ್ಳಿ
ಮಕ್ಕಳನ್ನು ಮೊದಲೇ
ತಡ ಮಾಡ ಬೇಡಿ ತನ್ನಿ
ಬಾಲರನ್ನು ಸ್ವಾಮಿಗೆ.
ತೊಡಕಾಗದಂತೆ ನೋಡಿ
ಪರಲೋಕಮಾರ್ಗದಿ
ಯೇಸುಪಾದಕೆಲ್ಲರನ್ನು
ಕರಕೊಂಡು ಬನ್ನಿರಿ.

Verse 4

ಏಳು ದೆವ್ವ ಹಿಡಿದಷ್ಟು
ಕೆಟ್ಟು ಹೋದ ಹೆಂಗಸು
ಸೀಮೋನ್ ಲೇವಿ ಸೌಲರಷ್ಟು
ಪಾಪ ಮಾಡಿದವರು.
ಯೇಸು ಸ್ವಾಮಿ ಕರೆ ಕೇಳಿ
ಧೈರ್ಯಗೊಂಡು ಬರಲಿ
ನಾಚಿಕೊಳ್ಳೋ ನೀಚರನ್ನು
ಕರಕೊಂಡು ಬನ್ನಿರಿ.

Go to top