Verse 1

ಈ ಹೊತ್ತಿಗಿಲ್ಲಿ ಯಾತಕೆ
ಮಹಾ ಸಮೂಹ ಕೂಡಿದೆ?
ಓಡ್ಯಾಟಕೇನು ಕಾರಣ?
ಬಂದಾತ ಯಾರು ಬಲ್ಲಿರಾ?          
ಒಬ್ಬೊಬ್ಬರಿಂತು ಹೇಳ್ವರು
ನಜರೇತೂರಿನ ಯೇಸುವು.
ಒಬ್ಬೊಬ್ಬರಿಂತು ಹೇಳ್ವರು
ನಜರೇತೂರಿನ ಯೇಸುವು.

Verse 2

ಈ ಯೇಸು ಯಾರು? ಬಣ್ಣಿಸು
ಯಾಕೀತಗಾಗೀ ಫೋಷವು?
ಪ್ರಪಂಚವೆಲ್ಲ ಕೇಳುತೆ
ಈ ಭಾಗ್ಯದಾತ ಯಾರೆಲೆ?
ಒಬ್ಬೊಬ್ಬರಿಂತು ಹೇಳ್ವರು
ನಜರೇತೂರಿನ ಯೇಸುವು.
ಒಬ್ಬೊಬ್ಬರಿಂತು ಹೇಳ್ವರು
ನಜರೇತೂರಿನ ಯೇಸುವು.

Verse 3

ನಾವಾತನನ್ನು ಬಲ್ಲೆವು
ಉದ್ಧಾರ ಮಾಡ ಬಂದನು
ದೇಹಾತ್ಮಕೀತ ವೈದ್ಯನು
ಸದಾಸಂಜೀವದಾತನು.
ಒಬ್ಬೊಬ್ಬರಿಂತು ಹೇಳ್ವರು
ನಜರೇತೂರಿನ ಯೇಸುವು.
ಒಬ್ಬೊಬ್ಬರಿಂತು ಹೇಳ್ವರು
ನಜರೇತೂರಿನ ಯೇಸುವು.

Verse 4

ಈ ಸೀಮೆ ಗ್ರಾಮ ಗೃಹದಿ
ಒಬ್ಬೊಬ್ಬರಂ ಸಂದರ್ಶಿಸಿ
ಸಂಜೀವ ಬೇಕೊ ನಿನಗು?
ಎಂತಂಬ ಸ್ವಾಮಿ ಯಾವನು?
ಒಬ್ಬೊಬ್ಬರಿಂತು ಹೇಳ್ವರು
ನಜರೇತೂರಿನ ಯೇಸುವು.
ಒಬ್ಬೊಬ್ಬರಿಂತು ಹೇಳ್ವರು
ನಜರೇತೂರಿನ ಯೇಸುವು.

Verse 5

ಸದ್ಭಕ್ತರೆಲ್ಲ ಬನ್ನಿರಿ
ನೀವೇನು ಸಾಕ್ಷಿ ಹೇಳ್ವರಿ?
ವಿಮುಕ್ತಿ ತೃಪ್ತಿ ಶಾಂತಿಯು
ಯಾರಿಂದ ನಿಮಗಾಯಿತು?
ಒಬ್ಬೊಬ್ಬರಿಂತು ಹೇಳ್ವರು
ನಜರೇತೂರಿನ ಯೇಸುವು.
ಒಬ್ಬೊಬ್ಬರಿಂತು ಹೇಳ್ವರು
ನಜರೇತೂರಿನ ಯೇಸುವು.

Verse 6

ದುರ್ಗತರೆಲ್ಲ ಹೇಳಿರಿ
ಅನಂತ ತಾಪ ನರ್ಕದಿ
ಯಾಕಾಯು್ತು ನಿಮ್ಮ ಪ್ರಾಪ್ತಿಯು?
ಸ್ವೀಕಾರ ಮಾಡದಿದ್ದೆವು
ಉದಾರಿ ಹಾದು ಬಿಟ್ಟನು
ನಜರೇತೂರಿನ ಯೇಸುವು.
ಉದಾರಿ ಹಾದು ಬಿಟ್ಟನು
ನಜರೇತೂರಿನ ಯೇಸುವು.

Go to top